Select Your Language

Notifications

webdunia
webdunia
webdunia
webdunia

ಹ್ರಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಹೃದಯವಂತಿಕೆಗೆ ಮನಸೋತ ಪವನ್ ಕಲ್ಯಾಣ್

ಪವರ್ ಸ್ಟಾರ್ ಪವನ್ ಕಲ್ಯಾಣ್

Sampriya

ಬೆಂಗಳೂರು , ಬುಧವಾರ, 3 ಸೆಪ್ಟಂಬರ್ 2025 (15:44 IST)
Photo Credit X
ಬೆಂಗಳೂರು:  ಟಾಲಿವುಡ್ ಪವರ್ ಸ್ಟಾರ್‌, ಡಿಸಿಎಂ ಪವನ್ ಕಲ್ಯಾಣ್ ಅವರು ನಿನ್ನೆ  54ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇನ್ನೂ ತನ್ನ ಹುಟ್ಟುಹಬ್ಬವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಆಚರಿಸಿಕೊಂಡ ರೀತಿಗೆ ಪವನ್ ಕಲ್ಯಾಣ್‌ ಮನಸೋತು, ಪೋಸ್ಟ್ ಹಾಕಿ ಧನ್ಯವಾದನ್ನು ಸಲ್ಲಿಸಿದ್ದಾರೆ. 

ನಟ ಶಿವರಾಜ್ ಕುಮಾರ್ ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ್ದರು. ನಟ ಪವನ್ ಕಲ್ಯಾಣ್ ಅವರ ಅಭಿಮಾನಿಗಳ ಜೊತೆ ಕೇಕ್ ಕೇಕ್ ಕತ್ತರಿಸುವ ಮೂಲಕ ನಟ ಶಿವರಾಜ್ ಕುಮಾರ್ ಪವನ್ ಕಲ್ಯಾಣ್ ಅವರ ಜನ್ಮ ದಿನಾಚರಣೆ ಮಾಡಿ ವಿಶೇಷವಾಗಿ ಶುಭ ಹಾರೈಸಿದ್ದರು.

ಇನ್ನು ನಟನಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿಪೋಸ್ಟ್ ಹಂಚಿ ಶುಭಕೋರಿದ ಶಿವಣ್ಣ, 'ನಾನು ಅವರ ಜನ್ಮದಿನಾಚರಣೆಯಲ್ಲಿ ಭಾಗವಹಿಸುವುದು ಅವರಿಗೆ ಸಂತೋಷವನ್ನು ನೀಡಿದರೆ, ನಾನು ಅದನ್ನು ಹಲವು ಬಾರಿ ಮಾಡುತ್ತೇನೆ. ನಿಮ್ಮ ಮೇಲಿನ ಅವರ ಪ್ರೀತಿ ಯಾವಾಗಲೂ ನಿಮ್ಮ ಶಕ್ತಿಯಾಗಿರುತ್ತದೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಪವನ್ ಕಲ್ಯಾಣ್ ಅವರೇ. ಬೆಳೆಯುತ್ತಲೇ ಇರಿ, ಸ್ಫೂರ್ತಿ ನೀಡುತ್ತಾ ಇರಿ, ದೇವರು ನಿಮ್ಮನ್ನು ಆಶೀರ್ವದಿಸಲಿ! ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ನಟ ಪವನ್ ಕಲ್ಯಾಣ್ ಕೂಡ ಪ್ರತಿಕ್ರಿಯೆ ನೀಡಿ 'ಉದಾತ್ತ ಹೃದಯ ಮತ್ತು ಸರಳತೆ' ಎಂದು ಪ್ರತಿಕ್ರಿಯಿಸಿದ್ದರು.

ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ನಟ ಪವನ್ ಕಲ್ಯಾಣ್, 'ಕರುನಾಡ ಚಕ್ರವರ್ತಿ ಶ್ರೀ ಶಿವರಾಜ್ ಕುಮಾರ್, ನಮ್ಮ 'ಗಂಧದ ಗುಡಿ' ನಾಯಕ ಮತ್ತು ನನ್ನ ನೆಚ್ಚಿನ ಕನ್ನಡ ಐಕಾನ್ ಡಾ. ರಾಜ್‌ಕುಮಾರ್ ಅವರು ಅವರ ಪುತ್ರ. ಅವರು ನನ್ನ ಅಭಿಮಾನಿಗಳೊಂದಿಗೆ ನನ್ನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಅಪಾರ ಸಂತೋಷವನ್ನುಂಟು ಮಾಡಿದೆ' ಎಂದಿದ್ದಾರೆ.

ಅಂತೆಯೇ 'ಈ ನಡೆ ಅವರ ಉದಾತ್ತ ಹೃದಯ ಮತ್ತು ಸರಳತೆಯನ್ನು ಪ್ರತಿಬಿಂಬಿಸುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಅವರಿಗೆ ಸಂಪೂರ್ಣ ಆರೋಗ್ಯ ಮತ್ತು ಸಂತೋಷವನ್ನು ನೀಡಿ, ಅವರ ಗಮನಾರ್ಹ ಪ್ರದರ್ಶನಗಳಿಂದ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ಮತ್ತು ಮನರಂಜನೆಯನ್ನು ನೀಡುವುದನ್ನು ಮುಂದುವರಿಸಬೇಕೆಂದು ನಾನು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ' ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಭಾರತಿ ವಿಷ್ಣುವರ್ಧನ್ ಹೇಳಿದ್ದೇನು