Select Your Language

Notifications

webdunia
webdunia
webdunia
webdunia

ಕಟೌಟ್ ಹಾಕಲು ಹೋಗಿ ಸಾವನ್ನಪ್ಪಿದ ಪವನ್ ಕಲ್ಯಾಣ ಅಭಿಮಾನಿಗಳು; ನೆರವಿಗೆ ನಿಂತ ಟಾಲಿವುಡ್ ನ ಸ್ಟಾರ್ ನಟರು

webdunia
ಗುರುವಾರ, 3 ಸೆಪ್ಟಂಬರ್ 2020 (09:42 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ  ಕಟೌಟ್ ಹಾಕಲು ಹೋಗಿ ಸಾವನಪ್ಪಿದ ಪವನ್ ಕಲ್ಯಾಣ ಅಭಿಮಾನಿಗಳ ಕುಟುಂಬದ ನೆರವಿಗೆ ಇದೀಗ ಟಾಲಿವುಡ್ ಚಿತ್ರರಂಗವೇ ನಿಂತಿದೆ ಎನ್ನಲಾಗಿದೆ.

ನಟ ಪವನ್ ಕಲ್ಯಾಣ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸುಮಾರು 25 ಅಡಿ ಎತ್ತರದ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಈ ಘಟನೆ ಬಗ್ಗೆ ನಟ ಪವನ್ ಕಲ್ಯಾಣ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಜನಸೇನಾ ಪಕ್ಷದ ಪರವಾಗಿ ತಲಾ 2 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಅಷ್ಟೇ ಅಲ್ಲದೇ ಪವನ್ ಕಲ್ಯಾಣ್ ಮೃತ ಅಭಿಮಾನಿಗಳ ಕುಟುಂಬಕ್ಕೆ ಟಾಲಿವುಡ್ ನ ಖ್ಯಾತ ನಟರಾದ ಅಲ್ಲು ಅರ್ಜುನ್  2ಲಕ್ಷ ರೂ. ಹಾಗೂ ರಾಮ್ ಚರಣ್ ತೇಜಾ ಅವರು 2.5ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಹಾಗೇ ಪವನ್ ಕಲ್ಯಾಣ್ ಸಿನಿಮಾ ನಿರ್ಮಾಣ ಸಂಸ್ಥೆಗಳು ಕೂಡ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ.

 

 

Share this Story:

Follow Webdunia Hindi

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ರಾಗಿಣಿ ಬಳಿಕ ನಟಿ ಸಂಜನಾ ಆಪ್ತ ರಾಹುಲ್ ಪೊಲೀಸ್ ವಶಕ್ಕೆ