Publish Date: Sun, 27 Aug 2023 (07:00 IST)
Updated Date: Sun, 27 Aug 2023 (07:04 IST)
ಬೆಂಗಳೂರು: ರಾಜ್ ಬಿ ಶೆಟ್ಟಿ ನಾಯಕರಾಗಿರುವ ಟೋಬಿ ಸಿನಿಮಾ ನಿನ್ನೆ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದೆ. ಟೋಬಿ ಸಿನಿಮಾ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ?
ರಾಜ್ ಬಿ ಶೆಟ್ಟಿ ಸಿನಿಮಾ ಬಗ್ಗೆ ಮೊದಲಿನಿಂದಲೂ ಭಾರೀ ನಿರೀಕ್ಷೆಯಿತ್ತು. ಅದರಂತೆ ಮೊದಲ ದಿನ ಚಿತ್ರ ನೋಡಲು ಸಾಕಷ್ಟು ಜನ ಪ್ರೇಕ್ಷಕರು ಬಂದಿದ್ದಾರೆ.
ಮೊದಲ ದಿನ ಟೋಬಿ ಗಳಿಕೆ 1.50 ಕೋಟಿಯಿಂದ 2 ಕೋಟಿವರೆಗೆ ಎನ್ನಲಾಗಿದೆ. ಕೆಲವರು ಟೋಬಿ ನಿರೀಕ್ಷೆಗೆ ತಕ್ಕ ಇರಲಿಲ್ಲ ಎಂದು ಅಭಿಪ್ರಾಯಪಟ್ಟವರೂ ಇದ್ದಾರೆ. ಆದರೆ ರಜೆಯಿರುವ ಕಾರಣಕ್ಕೆ ವೀಕೆಂಡ್ ನಲ್ಲಿ ಕೊಂಚ ಗಳಿಕೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ.