ಹೈದರಾಬಾದ್ : ಉಪ್ಪೇನಾ ಖ್ಯಾತಿಯ ಬುಚಿ ಬಾಬು ಸನಾ ಈಗ ಟಾಲಿವುಡ್ ನ ಸ್ಟಾರ್ ನಟನೊಂದಿಗೆ ಕ್ರೀಡಾ ಆಧಾರಿತ ಚಿತ್ರ ಮಾಡಲು ಯೋಜಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಹೌದು, ಬುಚಿ ಬಾಬು ಸನಾ ಅವರು ಜೂನಿಯರ್ ಎನ್ ಟಿಆರ್ ಅವರ ಜೊತೆ ಕ್ರೀಡಾ ಆಧಾರಿತ ಚಿತ್ರ ಮಾಡಲು ಹೊರಟಿದ್ದು, ಇದರಲ್ಲಿ ಜೂನಿಯರ್ ಎನ್ ಟಿಆರ್ ಅವರು 60 ವರ್ಷ ವಯಸ್ಸಿನ ಕ್ರೀಡಾಪಟು ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದು, ನಿರ್ದೇಶಕರು ಈಗಾಗಲೇ ಜೂನಿಯರ್ ಎನ್ ಟಿಆರ್ ಅವರು ಸಂಪರ್ಕಿಸಿ ಈ ಬಗ್ಗೆ ಮಾತನಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಚಿತ್ರತಂಡ ಜೂನಿಯರ್ ಎನ್ ಟಿಆರ್ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಈ ಕ್ರೀಡಾ ಆಧಾರಿತ ಚಿತ್ರ ಹಿಂದಿ ಚಿತ್ರ ದಂಗಲ್ ಮಾದರಿಯಲ್ಲಿರಲಿದೆ ಎನ್ನಲಾಗಿದೆ.