ಹೈದರಾಬಾದ್ : ಇತ್ತೀಚೆಗಷ್ಟೇ ಬಿಡುಗಡೆಯಾದ ಉಪ್ಪೇನಾ ಚಿತ್ರದಲ್ಲಿ ನಟ ವೈಷ್ಣವ್ ತೇಜ್ ಅವರ ಜೊತೆ ನಟಿಸಿದ ನಟಿ ಕೃತಿ ಶೆಟ್ಟಿ ಜನರ ಮನಗೆದ್ದು, ಇದೀಗ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಉಪ್ಪೇನಾ ಚಿತ್ರದ ಬಳಿಕ ನಟಿ ಕೃತಿ ಶೆಟ್ಟಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಾವುದೇ ಶಾಪ್, ಮಾಲ್ ಗಳ ಓಪನಿಂಗ್ ಕಾರ್ಯಕ್ರಮಕ್ಕೆ ನಟಿಯನ್ನು ಆಹ್ವಾನಿಸಲಾಗುತ್ತಿದ್ದು, ಅಲ್ಲಿ ಅವರು ಭಾರೀ ಕೊಡುಗೆಯನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಕೃತಿ ಶೆಟ್ಟಿ ಇತ್ತೀಚೆಗೆ ಓಪನಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅದಕ್ಕಾಗಿ ಅವರು 12 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರು ಈಗಾಗಲೇ 4 ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಕೃತಿ ಶೆಟ್ಟಿ ಅವರ ಅದೃಷ್ಟದ ಬಾಗಿಲು ತೆರೆದಿದೆ ಎನ್ನಲಾಗಿದೆ.