ಹೈದರಾಬಾದ್: ರಶ್ಮಿಕಾ ಮಂದಣ್ಣ-ರಕ್ಷಿತ್ ಶೆಟ್ಟಿ ಎಂಗೇಜ್ ಮೆಂಟ್ ಮುರಿದು ಬಿದ್ದಾಗ ರಶ್ಮಿಕಾಗೆ ವಿಜಯ್ ದೇವರಕೊಂಡ ಸಪೋರ್ಟ್ ಆಗಿ ನಿಂತಿದ್ದರು.
ಈ ವೇಳೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಡುವೆ ಸ್ನೇಹ ಗಾಢವಾಗಿತ್ತು. ಬಳಿಕ ಇಬ್ಬರೂ ಡೇಟಿಂಗ್ ನಡೆಸುವ ಸುದ್ದಿಯೂ ಕೇಳಿಬಂದಿತ್ತು.
ಇದೀಗ ವಿಜಯ್ ದೇವರಕೊಂಡ ವೈವಾಹಿಕ ಜೀವನ ಮುರಿದುಕೊಂಡಿರುವ ಸಮಂತಾ ಋತು ಪ್ರಭುಗೆ ಬೆಂಬಲವಾಗಿ ನಿಂತಿದ್ದಾರೆ. ಸಮಂತಾ ವೈಯಕ್ತಿಕ ಜೀವನದಲ್ಲಿ ವಿಚ್ಛೇದನ, ಆರೋಗ್ಯ ಸಮಸ್ಯೆಗಳಿಂದ ಕುಗ್ಗಿಹೋಗಿದ್ದರು. ಇದೇ ವೇಳೆ ಅವರು ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ಇಬ್ಬರೂ ಹತ್ತಿರವಾಗಿದ್ದಾರೆ. ಟರ್ಕಿಯಲ್ಲಿ ಶೂಟಿಂಗ್ ಮಾಡುವಾಗ ಜೊತೆಯಾಗಿ ಲಂಚ್ ಮಾಡುವ ಫೋಟೋ ಹಂಚಿಕೊಂಡಿರುವ ಸಮಂತಾ ವಿಜಯ್ ದೇವರಕೊಂಡ ತನಗೆ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ ಉತ್ತಮ ಗೆಳೇಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಹೀಗಾಗಿ ಅಂದು ರಶ್ಮಿಕಾಗೆ ಗೆಳೆಯನಾಗಿ ಬೆಂಬಲವಾಗಿ ನಿಂತಿದ್ದ ವಿಜಯ್ ಇಂದು ಬ್ರೇಕಪ್ ಆಗಿರುವ ಸಮಂತಾಗೆ ಜೊತೆಯಾಗಿ ನಿಂತಿದ್ದಾರೆ ಎನ್ನಬಹುದು.