Select Your Language

Notifications

webdunia
webdunia
webdunia
webdunia

ಬಾಲಿವುಡ್ ಚಿತ್ರದಲ್ಲಿ ಟೈಗರ್ ಶ್ರಾಫ್ ಬದಲಿಗೆ ನಟಿಸಲಿದ್ದಾರಂತೆ ಟಾಲಿವುಡ್ ನ ಸ್ಟಾರ್ ನಟ

ಬಾಲಿವುಡ್ ಚಿತ್ರದಲ್ಲಿ ಟೈಗರ್ ಶ್ರಾಫ್ ಬದಲಿಗೆ ನಟಿಸಲಿದ್ದಾರಂತೆ ಟಾಲಿವುಡ್ ನ ಸ್ಟಾರ್ ನಟ
ಹೈದರಾಬಾದ್ , ಸೋಮವಾರ, 5 ಏಪ್ರಿಲ್ 2021 (11:15 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಅವರು ಮುಂಬರುವ ದೊಡ್ಡ ಬಜೆಟ್ ನ ಬಾಲಿವುಡ್ ಚಿತ್ರ ‘ರಾಂಬೊ’ಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಸಿಲ್ವೆಸ್ಟರ್ ಸ್ಟಾಲೋನ್  ಅವರ ಹಾಲಿವುಡ್ ಆಕ್ಷನ್ ಚಿತ್ರ ‘ರಾಂಬೋ’ ದ ಹಿಂದಿ ರಿಮೇಕ್ ನಲ್ಲಿ ಮುಖ್ಯ ಪಾತ್ರದಲ್ಲಿ  ಬಾಲಿವುಡ್ ನಟ ಟೈಗರ್ ಶ್ರಾಫ್ ನಟಿಸಬೇಕಿತ್ತು. ಆದರೆ ಅವರ ಡೇಟಿಂಗ್ ಲಭ್ಯವಿಲ್ಲದ ಕಾರಣ ಅವರು ಯೋಜನೆಯಿಂದ ಹೊರನಡೆದಿದ್ದಾರೆ.

ಹಾಗಾಗಿ ಚಿತ್ರದ ನಿರ್ಮಾಪಕರು ಪ್ರಭಾಸ್ ಅವರನ್ನು ಈ ಚಿತ್ರಕ್ಕಾಗಿ ಕರೆತರಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಪ್ರಭಾಸ್ ಅವರನ್ನು ಚಿತ್ರದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಸಂಪರ್ಕಿಸಿ ಮಾತುಕತೆ ನಡೆಸಿದ್ದು, ಇದಕ್ಕೆ ಪ್ರಭಾಸ್ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ನಟ ಅಕ್ಷಯ್ ಕುಮಾರ್