Publish Date: Fri, 11 Sep 2026 (14:06 IST)
Updated Date: Fri, 11 Sep 2026 (14:14 IST)
ಬೆಂಗಳೂರು: ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ಮತ್ತೆ ಆರಂಭವಾಗುತ್ತಿದೆ.
ಮಹಿಳೆಯರಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಲು ಮತ್ತು ಅವರ ಕನಸುಗಳಿಗೆ ವೇದಿಕೆ ಕಲ್ಪಿಸಲು ಮತ್ತೊಮ್ಮೆ ಅದ್ಭುತ ಅವಕಾಶವನ್ನು ಸೃಷ್ಟಿಸುತ್ತಿದೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ - ಸೂಪರ್ ಮಾಮ್ ಶೋ ಮೂಲಕ ತಾಯಿ ಮತ್ತು ಮಕ್ಕಳ ಬಾಂಧವ್ಯದ ಜೊತೆಗೆ ಮನರಂಜನೆಯೂ ಭರ್ಜರಿಯಾಗಿರಲಿದೆ.
ಸೆಪ್ಟೆಂಬರ್ 12 ರಿಂದ ಪ್ರತಿ ವಾರಾಂತ್ಯದಲ್ಲಿ ಈ ರಿಯಾಲಿಟಿ ಶೋ ನಡೆಯಲಿದೆ. ಎಂದಿನಂತೆ ಜನಪ್ರಿಯ ನಿರೂಪಕಿ ಅನುಶ್ರೀ ಈ ಶೋ ಅನ್ನು ನಡೆಸಿಕೊಡಲಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ಮಹಾ ಗುರು), ನಟಿ ರಚಿತಾ ರಾಮ್, ನಟ ವಿಜಯ್ ರಾಘವೇಂದ್ರ ಹಾಗೂ ನಿರ್ದೇಶಕ ತರುಣ್ ಸುಧೀರ್ ತೀರ್ಪುಗಾರರಾಗಿ ತಾಯಂದಿರ ಪ್ರತಿಭೆಯನ್ನು ಮೌಲ್ಯಮಾಪನ ಮಾಡಲಿದ್ದಾರೆ.
ಕುಟುಂಬದ ಜವಾಬ್ದಾರಿಗಳು ಮತ್ತು ಬ್ಯುಸಿ ಜೀವನದ ನಡುವೆಯೂ ತಮ್ಮ ನೃತ್ಯದ ಕನಸನ್ನು ಮರೆತುಹೋಗದ ಅಮ್ಮಂದಿರಿಗೆ ಈ ವೇದಿಕೆ ಅತ್ಯುತ್ತಮ ಅವಕಾಶ ಕಲ್ಪಿಸಿದೆ. ವೀಕ್ಷಕರು ಇದನ್ನು ಜೀ ಕನ್ನಡ ವಾಹಿನಿ ಹಾಗೂ ZEE5 ಒಟಿಟಿ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ