Daily Horoscope

Select Your Language

Notifications

webdunia
webdunia
webdunia
webdunia

Video: ಕಮಲಿ ಸೀರಿಯಲ್ ನಲ್ಲಿ ನಿಜವಾಗಿಯೂ ನಿರಂಜನ್ ನನಗೆ ಮೂರು ಗಂಟು ಕಟ್ಟಿದ್ರು: ಅಮೂಲ್ಯ ಗೌಡ

Amulya-Niranjan
Photo Credit: Social media
ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ನಿಜವಾಗಿಯೂ ನಿರಂಜನ್ ನನಗೆ ಮೂರು ಗಂಟು ಕಟ್ಟಿದ್ರು ಎಂದು ನಟಿ ಅಮೂಲ್ಯ ಗೌಡ ಹೇಳಿಕೊಂಡಿದ್ದಾರೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರವಾಹಿಯಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದ ಅಮೂಲ್ಯ ಮತ್ತು ನಿರಂಜನ್ ನಿಜ ಜೀವನದಲ್ಲೂ ಜೋಡಿಯಾಗಿದ್ದಾರೆ. ಇಬ್ಬರೂ ತಮ್ಮ ಪ್ರೀತಿ ವಿಚಾರವನ್ನು ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಿಸಿದ್ದರು. ಕಮಲಿ ಧಾರವಾಹಿ ಸಂದರ್ಭದಲ್ಲೇ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು.

ಇದೀಗ ಕೀರ್ತಿ ಇಎನ್ ಟಿ ಯೂ ಟ್ಯೂಬ್ ಚಾನೆಲ್ ಗೆ ಈ ಇಬ್ಬರೂ ಜೊತೆಯಾಗಿ ಸಂದರ್ಶನ ನೀಡಿದ್ದಾರೆ. ಈ ವೇಳೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ಅತಿಥಿಗಳನ್ನು ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಾಗುತ್ತದೆ.

ಈ ಶೋನಲ್ಲಿ ನಿರಂಜನ್ ಮತ್ತು ಅಮೂಲ್ಯಗೆ ನಿರೂಪಕರು ಕಮಲಿ ಧಾರವಾಹಿಯ ಮದುವೆ ಕ್ಲಿಪ್ಪಿಂಗ್ ವಿಡಿಯೋ ತೋರಿಸಿ ನೀವು ಮದುವೆ ರಿಹರ್ಸಲ್ ಮಾಡಿದ್ದೀರಿ ಎನಿಸುತ್ತೆ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಅಮೂಲ್ಯ ‘ಹೌದು ಕಮಲಿ ಧಾರವಾಹಿಯಲ್ಲಿ ನನಗೆ ನಿರ್ದೇಶಕರ ಬಳಿ ಹೇಳಿ ನಿಜವಾಗಿಯೂ ಮೂರು ಗಂಟು ಹಾಕಿದ್ರು’ ಎಂದಿದ್ದಾರೆ. ‘ಹೌದು, ಮದುವೆಯಾಗುವಾಗ ಪ್ರಾಕ್ಟೀಸ್ ಆಗೋದು ಬೇಡ್ವಾ ಅದಕ್ಕೆ ಮೂರು ಗಂಟು ಹಾಕ್ದೆ’ ಎಂದಿದ್ದಾರೆ. ಈ ಎಪಿಸೋಡ್ ನ ಲಿಂಕ್ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

BBK13: ತಾಂಡವ್ ಜೊತೆ ಗುಸು ಗುಸು ಮಾತನಾಡಿ ನಿಯಮವನ್ನೇ ಮುರಿದ್ರಾ ಗಗನ್: ವೀಕೆಂಡ್ ನಲ್ಲಿ ಕಾದಿದೆ ಮಾರಿಹಬ್ಬ ಎಂದ ಪ್ರೇಕ್ಷಕರು