Publish Date: Tue, 08 Sep 2026 (18:56 IST)
Updated Date: Tue, 08 Sep 2026 (18:58 IST)
ಬೆಂಗಳೂರು: ಬಿಗ್‌ಬಾಸ್ ಸೀಸನ್ 13 ಆರಂಭವಾಗುತ್ತಿದ್ದ ಹಾಗೇ ಸ್ಪರ್ಧಿಗಳಿಗೆ ವಿಮಾನದಲ್ಲೇ ಎಂಟ್ರಿ ಕೊಡಿಸಿದ್ದು, ಮೊದಲ ದಿನ ನಡೆದ ಚಟುವಟಿಕೆಯಲ್ಲಿ ಇದೀಗ 8ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮನೆಯೊಳಗೆ ಪ್ರವೇಶಿಸಿರುವ ಸ್ಪರ್ಧಿಗಳಿಗೆ ಭರ್ಜರಿ ಟಾಸ್ಕ್ ಶುರುವಾಗಿದ್ದು ಬಿಗ್‌ಬಾಸ್ ಎಲ್ಲರಿಗೂ ಬಾಕ್ಸ್ ನೀಡಿದ್ದಾರೆ. ಆದರೆ 8 ಸ್ಪರ್ಧಿಗಳಿಗೆ ನೀಡಿರುವ ಡೈಮಂಡ್ ಬಾಕ್ಸ್‌ನಲ್ಲಿ ಒಬ್ಬರ ಬಾಕ್ಸ್‌ನಲ್ಲಿ ಮಾತ್ರವೇ ಡೈಮಂಡ್ ಇದೆ. ಆದರೆ ಸಿಕ್ಕವರು ಎಲ್ಲರೊಂದಿಗೆ ಗೌಪ್ಯತೆ ಕಾಪಾಡಿಕೊಂಡು ಬಿಗ್‌ಬಾಸ್‌ನಿಂದ ಅಧಿಕೃತ ಸೂಚನೆ ಬರೋವರೆಗೂ ರಹಸ್ಯವಾಗಿ ಇರಿಸಿಕೊಂಡರೆ ನಾಮಿನೇಷನ್‌ನಿಂದ ಪಾರಾಗುತ್ತಾರೆ. ರಹಸ್ಯ ಕಾಪಾಡಿಕೊಳ್ಳದಿದ್ದರೆ ಆ ಸ್ಪರ್ಧಿ ನೇರವಾಗಿ ನಾಮಿನೇಟ್ ಆಗುತ್ತಾರೆ. ಹೀಗಾಗಿ ಇಂಥಹ ಮಹತ್ವದ ವಜ್ರ ಸ್ಪರ್ಧಿ ಗಗನ್ ಚಿನ್ನಪ್ಪ ಪಾಲಿಗೆ ಧಕ್ಕಿದೆ.
ಬಿಗ್‌ಬಾಸ್ ಮನೆಯಲ್ಲಿ ಇರುವ 8 ಸ್ಪರ್ಧಿಗಳಲ್ಲಿ ಡೈಮಂಡ್ ಇರುವ ಬಾಕ್ಸ್ ಯಾರ ಬಳಿ ಇದೆ ಅನ್ನೋ ಹುಡುಕಾಟ ಶುರುವಾಗಿದೆ. ಆದರೆ ಇದೀಗ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆಮಾಡಿರುವ ಪ್ರೋಮೋದಲ್ಲಿ ಗಗನ್ ಅವರು ಮನೆಯವರನ್ನು ಚೆನ್ನಾಗಿ ಆಟವಾಡಿಸಿದ್ದಾರೆ. ಕೊನೆಗೂ ವಜ್ರವನ್ನು ತನ್ನ ಬಳಿಯೇ ಗಗನ್ ಉಳಿಸಿಕೊಂಡಿದ್ದಾರೆ.
ಹೀಗಾಗಿ ಆರಂಭದಲ್ಲೇ ಗಗನ್ ಮಿಂಚಿನ ಆಟ, ಯುಕ್ತಿಯಿಂದ ಗೆಲ್ಲುವ ಪ್ರಕ್ರಿಯೆ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದೆ. ಗಗನ್ ಕೂಡ ಶಕ್ತಿಯಿಂದಲ್ಲ ಕೆಲವೊಂದನ್ನ ಯುಕ್ತಿಯಿಂದ ಗೆಲ್ಲಬೇಕು ಎಂದು ಪ್ರತಿಸ್ಪರ್ಧಿಗಳನ್ನು ಕನ್ಫ್ಯೂಸ್ ಮಾಡಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ