Publish Date: Sun, 02 Aug 2026 (20:49 IST)
Updated Date: Sun, 02 Aug 2026 (20:52 IST)
ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡ ಈ ಆವೃತ್ತಿಯ ಮೊದಲ ಪ್ರೋಮೊ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಕಿಚ್ಚು ಹೆಚ್ಚಿದೆ.
ಪ್ರತಿ ಬಾರಿ ವರ್ಷಾಂತ್ಯಕ್ಕೆ ಶುರು ಆಗುತ್ತಿದ್ದ ಬಿಗ್‌ಬಾಸ್ ರಿಯಾಲಿಟಿ ಶೋ ಈ ಬಾರಿ ಬೇಗನೆ ಶುರು ಆಗಲಿದೆ. ಸುದೀಪ್ ಅವರ ಮೊದಲ ಪ್ರೋಮೊ ಬಿಡುಗಡೆ ಆಗಿದೆ. ಆ ಮೂಲಕ ಈ ವರ್ಷದ ಬಿಗ್‌ಬಾಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
13ನೇ ಸೀಸನ್ ಇದಾಗಿದ್ದು, ಸಾಕಷ್ಟು ಭಿನ್ನತೆಯನ್ನು ಈ ಸೀಸನ್ನಲ್ಲಿ ತರುವ ಪ್ರಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ವರ್ಷ ಸಾಮಾನ್ಯರನ್ನು ಸಹ ಬಿಗ್‌ಬಾಸ್ ಮನೆಯ ಒಳಗೆ ಕಳಿಸಲಾಗುತ್ತಿದೆ. ಜೊತೆಗೆ ಪ್ರತಿ ವರ್ಷದಂತೆ ಸಿನಿಮಾ, ಟಿವಿ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಇದ್ದೇ ಇರಲಿದ್ದಾರೆ.
ಮೊದಲ ಆವೃತ್ತಿಯಿಂದ ಬಿಗ್‌ಬಾಸ್ ಶೋ ನಡೆಸಿಕೊಡುತ್ತಿರುವ ಸುದೀಪ್ ಅವರು ದೊಡ್ಡ ಬಾಗಿಲನ್ನು ತೆರೆದು ಸ್ಟೈಲ್ ಆಗಿ ಎಂಟ್ರಿ ಕೊಡುತ್ತಿರುವ ದೃಶ್ಯ ಪ್ರೋಮೊನಲ್ಲಿದೆ. ಪ್ರೋಮೊನಲ್ಲಿ ಗಮನ ಸೆಳೆಯುತ್ತಿರುವುದು ಹಿನ್ನೆಲೆಯಲ್ಲಿ ಸುದೀಪ್ ಆಡಿರುವ ಮಾತುಗಳು, ಕರ್ನಾಟಕದ ಜನ ಯಾರಿಗಾದರೂ ಕಾದಿದ್ದು ಇತಿಹಾಸದಲ್ಲೇ ಇಲ್ಲ. ಆದರೆ ಪ್ರತಿ ವರ್ಷ ಒಂದು ವಿಷಯಕ್ಕಾಗಿ ಕಾಯುತ್ತಾರೆ ಎಂದು ಬಿಗ್ಬಾಸ್ಗಾಗಿ ವೀಕ್ಷಕರು ಕಾಯುತ್ತಿದ್ದಾರೆ ಎಂದಿದ್ದಾರೆ ಕಿಚ್ಚ.
ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು ಎನ್ನುವ ಸುದೀಪ್, ಸ್ಟೈಲ್ ಆಗಿ ಮತ್ತೆ ಶುರುಮಾಡೋಣ್ವ ಎಂದು ಬಿಗ್ಬಾಸ್ನ ಹೊಸ ಸೀಸನ್ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಪ್ರೋಮೊ ಅದ್ಧೂರಿಯಾಗಿಯೂ ಭಿನ್ನವಾಗಿಯೂ ಇದೆ. ಪ್ರೋಮೊನಲ್ಲಿ ಸುದೀಪ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ