Daily Horoscope

Select Your Language

Notifications

webdunia
webdunia
webdunia
webdunia

BBK13: ತಾಂಡವ್ ಜೊತೆ ಗುಸು ಗುಸು ಮಾತನಾಡಿ ನಿಯಮವನ್ನೇ ಮುರಿದ್ರಾ ಗಗನ್: ವೀಕೆಂಡ್ ನಲ್ಲಿ ಕಾದಿದೆ ಮಾರಿಹಬ್ಬ ಎಂದ ಪ್ರೇಕ್ಷಕರು

Gagan Chinnappa-Tandav Ram
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 13 ರ ಹೊಸ ಪ್ರೋಮೋವೊಂದನ್ನು ಕಲರ್ಸ್ ವಾಹಿನಿ ಹೊರಬಿಟ್ಟಿದ್ದು, ಇದರಲ್ಲಿ ತಾಂಡವ್ ಮತ್ತು ಗಗನ್ ಚಿನ್ನಪ್ಪ ನಡೆಸುತ್ತಿರುವ ಮಾತುಕತೆ ಈಗ ಎಲ್ಲರ ಗಮನ ಸೆಳೆದಿದೆ.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಗಗನ್ ಮತ್ತು ತಾಂಡವ್ ಪರಸ್ಪರ ಮಾತನಾಡುತ್ತಿರುತ್ತಾರೆ. ಮನೆಯ ಒಂದು ಮೂಲೆಯಲ್ಲಿ ಕೂತು ಗಗನ್ ‘ಇನ್ನೇನು ನಾಮಿನೇಷನ್ ಪ್ರಕ್ರಿಯೆ ಬರಲಿದೆ’ ಎಂದು ಹೇಳುತ್ತಾರೆ. ಆಗ ತಾಂಡವ್ ಯಾರನ್ನು ನಾಮಿನೇಟ್ ಮಾಡೋದು ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಗಗನ್ ಸಾಮಾನ್ಯ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ ಮಂಜು ಹೆಸರು ಹೇಳುತ್ತಾರೆ. ‘ಮಂಜ ನ ನಾಮಿನೇಟ್ ಮಾಡೋಣ’ ಎನ್ನುತ್ತಾರೆ.

ಈ ರೀತಿ ನಾಮಿನೇಟ್ ಯಾರನ್ನು ಮಾಡಬೇಕು ಎಂದು ಚರ್ಚೆ ನಡೆಸಿದ್ದು ಮೂಲ ನಿಯಮದ ಉಲ್ಲಂಘನೆ ಎನ್ನಲಾಗಿದೆ. ಈಗಾಗಲೇ ನಿನ್ನೆ ಟಾಸ್ಕ್ ವಿಚಾರದಲ್ಲೂ ಗಗನ್ ಆಟಿಟ್ಯೂಡ್ ತೋರಿಸುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದರ ನಡುವೆ ಗಗನ್ ಈಗ ನಾಮಿನೇಷನ್ ಬಗ್ಗೆ ತಾಂಡವ್ ಜೊತೆ ಚರ್ಚೆ ನಡೆಸಿದ್ದು ಗಂಭೀರ ಪ್ರಶ್ನೆ ಮೂಡಿಸಿದೆ.

ಈ ಪ್ರೋಮೋ ನೋಡಿದ ಜನ ‘ಈ ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ರಿಂದ ಗಗನ್ ಗೆ ಕಾದಿದೆ ಮಾರಿಹಬ್ಬ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು, ತಾಂಡವ್ ತಾವಾಗಿಯೇ ಗುರುತಿಸಿಕೊಳ್ಳದೇ ಗಗನ್ ಜೊತೆಗೇ ಸುತ್ತಾಡುತ್ತಿರುವುದರ ಬಗ್ಗೆಯೂ ವೀಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

BigBoss13, ಮೊದಲ ಚಟುವಟಿಕೆಯಲ್ಲೇ ಎಲ್ಲರಿಗೂ ಶಾಕ್ ಕೊಟ್ಟ ಗಗನ್‌