ಮುಂಬೈ: ತೀವ್ರ ಚರ್ಚೆಗೆ ಗುರಿಯಾಗಿರುವ ದಿ ಕೇರಳ ಸ್ಟೋರಿ ಸಿನಿಮಾಗೆ ಪಶ್ಚಿಮ ಬಂಗಾಲದಲ್ಲಿ ನಿಷೇಧ ಹೇರಲಾಗಿದ್ದರೆ, ಉತ್ತರ ಪ್ರದೇಶದಲ್ಲಿ ಟ್ಯಾಕ್ಸ್ ಫ್ರೀ ಎಂದು ಘೋಷಣೆ ಮಾಡಲಾಗಿದೆ.
ಲವ್ ಜಿಹಾದ್ ಬಗ್ಗೆ ಹೇಳಲಾಗಿರುವ ದಿ ಕೇರಳ ಸ್ಟೋರಿ ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾಗೆ ಬಲಪಂಥೀಯರ ಬೆಂಬಲವಿದ್ದರೆ ಎಡಪಂಥೀಯರಿಂದ ವಿರೋಧವಿದೆ.
ಈ ಹಿನ್ನಲೆಯಲ್ಲಿ ಪ.ಬಂಗಾಲದಲ್ಲಿ ಶಾಂತಿ ಕದಡುವ ಅಪಾಯವಿದೆ ಎಂಬ ಕಾರಣ ನೀಡಿ ಸಿನಿಮಾಗೆ ನಿಷೇಧ ಹೇರಲಾಗಿದೆ. ಆದರೆ ಬಿಜೆಪಿ ಸರ್ಕಾರವಿರುವ ಉತ್ತರ ಪ್ರದೇಶದಲ್ಲಿ ಸಿನಿಮಾ ಆತಂಕವಾದದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂಬ ಕಾರಣಕ್ಕೆ ಟ್ಯಾಕ್ಸ್ ಫ್ರೀ ಎಂದು ಘೋಷಣೆ ಮಾಡಲಾಗಿದೆ. ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನಗಳಾಗಿದ್ದು 45 ಕೋಟಿ ರೂ. ಗಳಿಕೆ ಮಾಡಿದೆ.