Select Your Language

Notifications

webdunia
webdunia
webdunia
webdunia

ಕಾಂತಾರ ಸೀಕ್ವೆಲ್‌ನಲ್ಲಿ ಕಾಣಿಸಿಕೊಂಡಿದ್ದ ಕಂಬಳ ಕೋಣ ಇನ್ನಿಲ್ಲ

ಕಾಂತಾರ ಸೀಕ್ವೆಲ್

Sampriya

ಉಡುಪಿ , ಶನಿವಾರ, 9 ಆಗಸ್ಟ್ 2025 (15:00 IST)
Photo Credit X
ಉಡುಪಿ: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾದಲ್ಲಿ ಕಂಬಳ ಹಾಗೂ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಕೋಣವನ್ನು ಸಾಕಿದ್ದರು. 

ಕರಾವಳಿ ಕಂಬಳದಲ್ಲಿ ಭಾರೀ ಮೆಡಲ್‌ಗಳನ್ನು ಈ ಕೋಣ ಬಾಚಿಕೊಂಡಿತ್ತು. ಕಂಬಳ ದೃಶ್ಯ ಹಾಗೂ ಕೊಟ್ಟಿಗೆಯ ದೃಶ್ಯದದಲ್ಲಿ ಅಪ್ಪು ಕೋಣ ಕಾಣಿಸಿಕೊಂಡಿತ್ತು. ಪರಮೇಶ್ವರ ಭಟ್‌ರ ಮಗಳಾದ ಚೈತ್ರಾ ಪರಮೇಶ್ವರ ಭಟ್ ಅವರ ಆರೈಕೆಯಲ್ಲಿ ಅಪ್ಪು ಮತ್ತು ಕಾಳ ಎನ್ನುವ ಕೋಣಗಳು ಬೆಳೆದಿದ್ದವು.

ಕಾಂತಾರ ಚಿತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆ ತೆರೆಯಲ್ಲಿ ಮಿಂಚಿತ್ತು. ಚಿತ್ರೀಕರಣಕ್ಕೆ ಅಪ್ಪು ಮತ್ತು ಕಾಳ ಎನ್ನುವ ಕೋಣಗಳ ಮೂಲಕ ತರಬೇತಿ ನೀಡಲಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅಪ್ಪು ಕೋಣ ನಿಧನಕ್ಕೆ ಫ್ಯಾನ್ಸ್ ಕಂಬನಿ  ಮಿಡಿದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಎಷ್ಟೇ ಬ್ಯುಸಿಯಿದ್ದರೂ ಇದೊಂದನ್ನು ಮಾತ್ರ ಮರೆಯಲ್ಲ