Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಎಷ್ಟೇ ಬ್ಯುಸಿಯಿದ್ದರೂ ಇದೊಂದನ್ನು ಮಾತ್ರ ಮರೆಯಲ್ಲ

Yash

Krishnaveni K

ಬೆಂಗಳೂರು , ಶನಿವಾರ, 9 ಆಗಸ್ಟ್ 2025 (14:28 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಎಷ್ಟೇ ಬ್ಯುಸಿಯಿದ್ದರೂ ಇದೊಂದು ಮಾತ್ರ ಮರೆಯಲ್ಲ. ಇದಕ್ಕೆ ನಿನ್ನೆ ಮತ್ತು ಇಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಫೋಟೋಗಳೇ ಸಾಕ್ಷಿ.

ಯಶ್ ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿಯಿದ್ದರೂ ತಮ್ಮ ಕುಟುಂಬಕ್ಕೆ ಅಷ್ಟೇ ಆದ್ಯತೆ ಕೊಡುತ್ತಾರೆ. ಕುಟುಂಬ ಎಂದು ಬಂದರೆ ಎಷ್ಟೇ ಬ್ಯುಸಿಯಿದ್ದರೂ ಎಲ್ಲೇ ಇದ್ದರೂ ನಾನು ಮನೆ ಮಗನಾಗಿ ಅಲ್ಲಿರುತ್ತೇನೆ ಎಂದು ಯಶ್ ಈ ಹಿಂದೆಯೂ ಒಮ್ಮೆ ಹೇಳಿದ್ದರು. ಅದರಂತೆ ಈಗ ನಡೆದುಕೊಂಡಿದ್ದಾರೆ.

ಯಶ್ ಸದ್ಯಕ್ಕೆ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾದಲ್ಲಿ ಏಕಕಾಲಕ್ಕೆ ನಟಿಸುತ್ತಿದ್ದಾರೆ. ಹೀಗಾಗಿ ಮುಂಬೈನಲ್ಲೇ ಬೀಡುಬಿಟ್ಟಿದ್ದಾರೆ. ಹಾಗಿದ್ದರೂ ನಿನ್ನೆ ವರಮಹಾಲಕ್ಷ್ಮಿ ಹಬ್ಬವಿತ್ತು. ಇದಕ್ಕಾಗಿ ಬೆಂಗಳೂರಿಗೆ ಓಡೋಡಿ ಬಂದಿದ್ದರು. ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ಲಕ್ಷ್ಮೀ ಪೂಜೆಯಲ್ಲಿ ಭಾಗಿಯಾಗಿದ್ದರು.

ಇಂದು  ರಾಖಿ ಹಬ್ಬ. ಹೀಗಾಗಿ ಸಹೋದರಿ ನಂದಿನಿ ಜೊತೆ ರಾಖಿ ಹಬ್ಬ ಆಚರಿಸಿದ್ದಾರೆ. ಯಶ್ ಎಲ್ಲೇ ಇದ್ದರೂ ಪ್ರತೀ ವರ್ಷ ತಮ್ಮ ತಂಗಿ ಕೈಯಲ್ಲಿ ರಾಖಿ ಕಟ್ಟಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಈ ವರ್ಷವೂ ಬ್ಯುಸಿ ಶೆಡ್ಯೂಲ್ ನಡುವೆಯೂ ತಂಗಿಯನ್ನು ಭೇಟಿಯಾಗಿ ರಾಖಿ ಹಬ್ಬ ಆಚರಿಸಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಕೋಟಿ ರೂ ವಂಚನೆ ಪ್ರಕರಣಕ್ಕೆ ಧ್ರುವ ಸರ್ಜಾ ಟೀಂ ಪ್ರತಿಕ್ರಿಯೆ