ಬೆಳ್ತಂಗಡಿ: ಶುಕ್ರವಾರ ಕರ್ನಾಟಕದಾದ್ಯಂತ ಅದ್ಧೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇನ್ನೂ ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಜೋರಾಗಿಯೇ ಇತ್ತು.
ಇನ್ನೂ ನಟ ತರುಣ್ ಸುಧೀರ್ ಸೋನಲ್, ನಟ ಧನಂಜಯ್ ದಂಪತಿಗೆ ಈ ವರ್ಷ ವಿಶೇಷ ಹಬ್ಬವಾಗಿತ್ತು. ಇದು ಅವರ ಮದುವೆ ನಂತರದ ಮೊದಲ ಹಬ್ಬವಾಗಿದೆ. ನಟಿ ಹರ್ಷಿಕಾ ಪೂಣಚ್ಚ, ಅವಿವಾ ಅಭಿಷೇಕ್‌ಗೆ ಮೊದಲ ಮಗುವಿನ ಆಗಮನದ ಬಳಿಕದ ಮೊದಲ ಹಬ್ಬವಾಗಿದೆ.
ಇನ್ನೂ ನಟ ಉಪೇಂದ್ರ ಪ್ರಿಯಾಂಕ, ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟಿ ಅದಿತಿ ಪ್ರಭುದೇವ್, ನಟಿ ಶ್ರುತಿ, ತುರಣ್ ಸುಧೀರ್, ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿರುತೆರೆ ಸೆಲೆಬ್ರಿಟಿಗಳ ಮನೆಯಲ್ಲೂ ಅದ್ಧೂರಿಯಾಗಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಯಿತು.
ಪೂಜೆಯ ಕ್ಷಣಗಳ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.