ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ವರಮಹಾಲಕ್ಷ್ಮಿ ಹಬ್ಬದಂದು ಪಾಪಗಳನ್ನು ಕಳೆಯುವ ಗೋ ಮಾತೆಗೆ ಹಣ್ಣು ತಿನಿಸುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪಶುಗಳು ಲಕ್ಷ್ಮೀ ದೇವಿಯ ಸಂಕೇತ ಎಂದು ನಾವು ಪೂಜಿಸುತ್ತೇವೆ. ಅದರಂತೇ ವರಮಹಾಲಕ್ಷ್ಮಿ ಹಬ್ಬದ ದಿನ ಮನೆ ಮುಂದೆ ಬಂದ ಗೋ ಮಾತೆಗೆ ಗೋ ಗ್ರಾಸ ಕೊಟ್ಟು ಪವಿತ್ರಾ ಗೌಡ ಭಕ್ತಿಯಿಂದ ನಮಸ್ಕರಿಸಿದ್ದಾರೆ.
ಗೋ ಮಾತೆಗೆ ಬಾಳೆಹಣ್ಣು ನೀರು ನೀಡಿ ನಮಸ್ಕರಿಸಿದ್ದಾರೆ. ಈ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ. ಜೀವನದಲ್ಲಿ ಏನೇ ಪಾಪ ಕರ್ಮಗಳನ್ನು ಮಾಡಿದ್ದರೂ ಗೋ ಮಾತೆಗೆ ಆಹಾರ ಒದಗಿಸುವುದರಿಂದ ಆಕೆ ಪಾಪ ಕಳೆಯುತ್ತಾಳೆ ಎನ್ನುವ ನಂಬಿಕೆಯಿದೆ. ಗೋ ಮಾತೆಯಲ್ಲಿ ಕೋಟ್ಯಾಂತರ ದೇವರುಗಳು ವಾಸಿಸುತ್ತಾರೆ ಎಂಬುದು ನಂಬಿಕೆ.
ಇದೀಗ ಪವಿತ್ರಾ ಗೌಡ ಗೋ ಮಾತೆಯ ಪೂಜೆ ಮಾಡಿದ್ದಕ್ಕೆ ನೆಟ್ಟಿಗರು ಕೆಲವರು ಟ್ರೋಲ್ ಮಾಡಿದ್ದರೆ ಮತ್ತೆ ಕೆಲವರು ಶುಭಾಶಯ ಕೋರಿದ್ದಾರೆ. ಕೆಲವರು ಪಾಪ ಮಾಡದ ತಪ್ಪಿಗೆ ಜೈಲಿಗೆ ಹೋಗಿ ಬಂದ್ರು ಇನ್ನಾದ್ರೂ ದೇವರು ಒಳ್ಳೆದು ಮಾಡಲಿ ಎಂದು ಅನುಕಂಪ ತೋರಿದ್ದಾರೆ. ಮತ್ತೆ ಕೆಲವರು ಮಾಡೋದು ಅನಾಚಾರ ಮನೆ ಮುಂದೆ ಬೃಂದಾವನ ಎಂದಿದ್ದಾರೆ.