Select Your Language

Notifications

webdunia
webdunia
webdunia
webdunia

ಮನುಷ್ಯರು ಬಣ್ಣ ಬದಲಾಯಿಸಿದರೇನು.. ದರ್ಶನ್ ಗೆ ಟಾಂಗ್ ಕೊಟ್ಟರಾ ಪವಿತ್ರಾ ಗೌಡ

Darshan

Krishnaveni K

ಬೆಂಗಳೂರು , ಗುರುವಾರ, 31 ಜುಲೈ 2025 (11:21 IST)

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈವತ್ತು ಮನುಷ್ಯರೂ ಬಣ್ಣ ಬದಲಾಯಿಸಿದರೇನು ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ದರ್ಶನ್ ಗೆ ಟಾಂಗ್ ಕೊಟ್ಟರಾ ಎಂಬ ಅನುಮಾನ ಮೂಡುತ್ತಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೇ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್ ಗೆ ಕರೆಸಿ ದರ್ಶನ್ ಆಂಡ್ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ ಎನ್ನುವುದು ಆರೋಪವಾಗಿದೆ.

ಈ ಪ್ರಕರಣದಲ್ಲಿ ದರ್ಶನ್ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಜೈಲಿಗೆ ಹೋಗಿ ಬಂದ ಮೇಲೆ ಪವಿತ್ರಾ ಗೌಡರಿಂದ ಅಂತರ ಕಾಯ್ದುಕೊಂಡಿದ್ದಾರೆ. ಎಲ್ಲೇ ಹೋಗುವುದಿದ್ದರೂ ಪತ್ನಿ ವಿಜಯಲಕ್ಷ್ಮಿ ಜೊತೆಗೇ ಹೋಗುತ್ತಿದ್ದಾರೆ. ಹೀಗಾಗಿ ಈಗ ಪವಿತ್ರಾ ಗೌಡ ಇಂತಹದ್ದೊಂದು ಪೋಸ್ಟ್ ಹಾಕಿರಬಹುದೇ ಎಂಬ ಅನುಮಾನ ಕಾಡುತ್ತಿದೆ.

ಇನ್ ಸ್ಟಾಗ್ರಾಂನಲ್ಲಿ ರಾಯರ ಫೋಟೋ ಹಾಕಿರುವ ಪವಿತ್ರಾ ‘ಮನುಷ್ಯರು ಬಣ್ಣ ಬದಲಾಯಿಸಿದರೇನು.. ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ.!! ನನ್ನ ಮೌನ ದೌರ್ಬಲ್ಯವಲ್ಲ. ಇದು ದೇವರ ತೀರ್ಮಾನದ ಮೇಲಿರುವ ನಂಬಿಕೆ’ ಎಂದು ಬರೆದುಕೊಂಡಿದ್ದಾರೆ. ತಮ್ಮಿಂದ ದೂರವುಳಿದಿರುವ ದರ್ಶನ್ ಗೇ ಟಾಂಗ್ ಕೊಟ್ಟು ಪವಿತ್ರಾ ಇಂತಹದ್ದೊಂದು ಸಂದೇಶ ಹಾಕಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಸುಪ್ರೀಂಕೋರ್ಟ್ ನಲ್ಲಿ ಸದ್ಯದಲ್ಲೇ ಆರೋಪಿಗಳ ಬೇಲ್ ಭವಿಷ್ಯ ತೀರ್ಮಾನವಾಗಲಿದ್ದು ಆ ಕಾರಣಕ್ಕೂ ಪವಿತ್ರಾ ಈ ಪೋಸ್ಟ್ ಹಾಕಿರಬಹುದು ಎನ್ನಲಾಗುತ್ತಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ, ಪ್ರಿಯಾ ಆಚಾರ್ ಜೋಡಿಯಾ ಏಳುಮಲೆ ಸಿನಿಮಾದ ಮೊದಲ ಹಾಡು ರಿಲೀಸ್‌