Select Your Language

Notifications

webdunia
webdunia
webdunia
webdunia

ವಿಜಯ್ ಮತ್ತು ಅಜಿತ್ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಾ ಈ ವಿಚಾರ?

ವಿಜಯ್ ಮತ್ತು ಅಜಿತ್ ಅಭಿಮಾನಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಾ ಈ ವಿಚಾರ?
ಚೆನ್ನೈ , ಗುರುವಾರ, 17 ಡಿಸೆಂಬರ್ 2020 (08:15 IST)
ಚೆನ್ನೈ : ತಮಿಳಿನ ಖ್ಯಾತ ನಟ ಕಮಾಂಡರ್ ವಿಜಯ್ ಅವರ ಮಾಸ್ಟರ್ ಚಿತ್ರ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಅದರ ಜೊತೆಗೆ ತಮಿಳಿನ ಮತ್ತೊಬ್ಬ ಖ್ಯಾತ ನಟ  ಥಾಲಾ ಅಜಿತ್ ಅವರು ವಿನೋದ್ ನಿರ್ದೇಶನದ ವಲಿಮೈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ನಡುವೆ ಸಂಯೋಜಕ ಯುವನ್ ಶಂಕರ್ ರಾಜಾ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಜಿತ್ ಸಿನಿಮಾವೊಂದಕ್ಕೆ ಸಂಗೀತ ಸಂಯೋಜಿಸುತ್ತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.ಈ ಫೋಟೊಗೆ ಇದುವರೆಗೆ 2,51,047 ಲೈಕ್ಸ್ ಗಳು ಬಂದಿವೆ.

ಇದಕ್ಕೆ ಅಜಿತ್ ಅಭಿಮಾನಿಗಳು ವಿಜಯ್ ಅವರ ಮಾಸ್ಟರ್ ಚಿತ್ರದ ಫೋಟೊಗೆ ಇದಕ್ಕಿಂತ ಕಡಿಮೆ ಲೈಕ್ಸ್ ಬಂದಿದೆ ಎಂದು ಫೋಟೋ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದ್ದಾರೆ. ಇದು ವಿಜಯ ಅಭಿಮಾನಿಗಳನ್ನು ಕೆರಳಿಸುತ್ತಿದ್ದು, ಎರಡು ಕಡೆಯಲ್ಲಿ ಸಂಘರ್ಷ ಏರ್ಪಡುವ ಸಂಭವವಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕೀಲ್ ಸಾಬ್ ಚಿತ್ರದಲ್ಲಿ ಪವನ್ ಕಲ್ಯಾಣ್ ಪಾತ್ರದ ಕಥೆ ಸೋರಿಕೆ