ಹೈದರಾಬಾದ್ : ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ವಕಿಲ್ ಸಾಬ್ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಇದು ಬಾಲಿವುಡ್ ಹಿಟ್ ಚಿತ್ರ ಪಿಂಕ್ ನ ರಿಮೇಕ್ ಎನ್ನಲಾಗಿದೆ.
ಈ ಚಿತ್ರವನ್ನು ಬೋನಿ ಕಪೂರ್ ಮತ್ತುದಿಲ್ ರಾಜು ನಿರ್ಮಿಸುತ್ತಿದ್ದು, ಶ್ರೀರಾಮ್ ವೇಣು ನಿರ್ದೇಶಿಸುತ್ತಿದ್ದಾರೆ. ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ಈ ನಡುವೆ ಇದೀಗ ಈ ಚಿತ್ರದಲ್ಲಿ ಪವನ್ ಕಲ್ಯಾಣ ಪಾತ್ರದ ಕಥೆ ಸೋರಿಕೆಯಾಗಿದೆ ಎನ್ನಲಾಗಿದೆ. ಪತ್ನಿಯನ್ನು ಕಳೆದುಕೊಂಡು ಮದ್ಯದ ದಾಸನಾಗಿದ್ದ ವಕೀಲ್ ಸಾಬ್ ಹೇಗೆ ಯಶಸ್ಸಿಯಾಗುತ್ತಾನೆ ಎಂಬುದು ಈ ಚಿತ್ರದ ಕಥೆಯಾಗಿದೆ. ಈ ಹಿಂದೆ ಮದ್ಯಪಾನ ಮಾಡುವ ದೃಶ್ಯದಲ್ಲಿ ನಟಿಸಿ ಯಶಸ್ಸು ಗಳಿಸಿದ ಪವನ್ ಈ ಚಿತ್ರದಲ್ಲಿಯೂ ಯಶಸ್ಸು ಗಳಿಸುವುದು ಖಚಿತ ಎನ್ನಲಾಗಿದೆ.