Select Your Language

Notifications

webdunia
webdunia
webdunia
Wednesday, 9 April 2025
webdunia

ಮೂರು ದಿನ ನಡೆಯುವ ಅನಂತ್‌ ಅಂಬಾನಿ, ರಾಧಿಕಾ ಮದುವೆಗೆ ಡ್ರೆಸ್‌ಕೋಡ್‌ ಹೀಗಿದೆ

Anant Ambani. Radhika's

sampriya

ಮುಂಬೈ , ಗುರುವಾರ, 30 ಮೇ 2024 (17:14 IST)
Photo By X
ಮುಂಬೈ: ಗ್ರ್ಯಾಂಡ್‌ ಆಗಿ ನಡೆದ ವಿವಾಹಪೂರ್ವ ಕಾರ್ಯಕ್ರಮದ ಕೆಲ ತಿಂಗಳ ಬಳಿಕ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಸಮಾರಂಭಕ್ಕೆ ದಿನ ನಿಗದಿಯಾಗಿದೆ.

ಜುಲೈ 12ರಿಂದ ಮೂರು ದಿನಗಳ ಕಾಲ ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್‌ನಲ್ಲಿ ಅದ್ಧೂರಿ ಮದುವೆಗೆ ಈಗಾಗಲೇ ಸಿದ್ಧತೆ ಶುರುವಾಗಿದೆ. ಮದುವೆ ಸಮಾರಂಭವು ಹಿಂದೂ ವೈದಿಕ ಸಂಪ್ರದಾಯದಂತೆ ನಡೆಯಲಿದೆ.

ಜುಲೈ 12ರಂದು ಮದುವೆಯ ಪ್ರಮುಖ ಕಾರ್ಯಕ್ರಮ ‘ಶುಭ ವಿವಾಹ’ ನೆರವೇರಲಿದೆ. 13ರಂದು ಶನಿವಾರ ‘ಶುಭ ಆಶೀರ್ವಾದ’ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಜುಲೈ 14ರಂದು ಮಂಗಳ ಉತ್ಸವ ಅಥವಾ ಆರತಕ್ಷತೆ ನಡೆಯಲಿದೆ ಎಂದು ವಿವಾಹದ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಮದುವೆ ಮಹೋತ್ಸವಕ್ಕೆ ಆಗಮಿಸುವವರಿಗೆ ವಸ್ತ್ರ ಸಂಹಿತೆ ಮಾಡಿದ್ದು ಜುಲೈ 12ರಂದು ಶುಭವಿವಾಕ್ಕೆ ಭಾರತದ ಸಾಂಪ್ರದಾಯಿಕ  ಉಡುಗೆ, 2ನೇ ದಿನ ಜುಲೈ 13ರಂದು ಶನಿವಾರ ‘ಶುಭ ಆಶೀರ್ವಾದ’ ಕಾರ್ಯಕ್ರಮದಲ್ಲಿ ಭಾರತೀಯ ಫಾರ್ಮಲ್ ಉಡುಗೆ ಹಾಗೂ ಜುಲೈ 14ರಂದು ಆರತಕ್ಷತೆಗೆ ಬರುವವರು ಸೀರೆ, ಲೆಹಂಗಾ, ಶೇರ್ವಾನಿಯಂತಹ ‘ಇಂಡಿಯನ್ ಚಿಕ್’ ಉಡುಗೆಗಳನ್ನು ಧರಿಸುವಂತೆ ವಸ್ತ್ರ ಸಂಹಿತೆ ಜಾರಿ ಮಾಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಾನ್‌ ವೈಲೆನ್ಸ್‌ ಚಿತ್ರಕ್ಕೆ ಹ್ಯಾಟ್ರಿಕ್‌ ಹೀರೊ ಸಾಥ್‌: ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಶಿವಣ್ಣ