Select Your Language

Notifications

webdunia
webdunia
webdunia
webdunia

ಸಿನಿಮಾ ಪ್ರಚಾರಕ್ಕೆ ಇಷ್ಟೆಲ್ಲಾ ಗಿಮಿಕ್ ಮಾಡಿದ್ರಾ ಪ್ರಭಾಸ್

Prabhas

Krishnaveni K

ಹೈದರಾಬಾದ್ , ಶನಿವಾರ, 18 ಮೇ 2024 (12:37 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ ಪೋಸ್ಟ್ ಒಂದು ಅವರ ಮದುವೆ ಬಗ್ಗೆ ಗಾಸಿಪ್ ಹಬ್ಬಲು ಕಾರಣವಾಗಿತ್ತು. ಆದರೆ ಪ್ರಭಾಸ್ ಇಷ್ಟೆಲ್ಲಾ ಗಿಮಿಕ್ ಮಾಡಿದ್ದು ಸಿನಿಮಾ ಪ್ರಚಾರಕ್ಕಾ ಎಂಬ ಅನುಮಾನ ಶುರುವಾಗಿದೆ.

ಡಾರ್ಲಿಂಗ್ಸ್ ವಿಶೇಷ ವ್ಯಕ್ತಿಯೊಬ್ಬರು ಕೊನೆಗೂ ನನ್ನ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಪ್ರಭಾಸ್ ಇನ್ ಸ್ಟಾದಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿ ಅನೇಕರು ಅವರು ಮದುವೆ ಬಗ್ಗೆಯೇ ಹೇಳುತ್ತಿರಬಹುದು ಎಂದು ಖುಷಿಪಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಮದುವೆ ಸುದ್ದಿ ಟ್ರೆಂಡ್ ಆಗಿತ್ತು.

ಆದರೆ ಇದೀಗ ಪ್ರಭಾಸ್ ಹೇಳಿದ್ದು ಮದುವೆ ಬಗ್ಗೆ ಅಲ್ಲ, ಅವರ ಮುಂದಿನ ಸಿನಿಮಾ ಕಲ್ಕಿ ಬಗ್ಗೆ ಗಿಮಿಕ್ ಮಾಡಿದ್ದು ಎಂಬ ಅನುಮಾನ ಮೂಡಿದೆ. ಕಲ್ಕಿ 2898 ಸಿನಿಮಾ ಬಗ್ಗೆ ಪ್ರಭಾಸ್ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆಯವರಂತಹ ಬಹುತಾರಾಗಣವೇ ಸಿನಿಮಾದಲ್ಲಿದೆ.

ಈ ಸಿನಿಮಾ ಪ್ರಚಾರಕ್ಕಾಗಿ ಇಂತಹದ್ದೊಂದು ತಂತ್ರ ಹೂಡಿದ್ದಾರೆ ಎನ್ನಲಾಗಿದೆ. ಇದರ ಪ್ರಚಾರಕ್ಕಾಗಿ ಚಿತ್ರತಂಡ ವಿಶೇಷ ಯೋಜನೆ ಹಾಕಿಕೊಂಡಿದೆ. ಆ ಯೋಜನೆಯ ಭಾಗವಾಗಿಯೇ ಈ ಸಂದೇಶ ಬಿಡಲಾಗಿದೆ. ಈ ಬಗ್ಗೆ ನಿಜಾಂಶ ಸದ್ಯದಲ್ಲೇ ಹೊರಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ದರ್ಶನ್ ಗೆ ನಾಯಕಿಯಾಗುತ್ತಿರುವ ರಚನಾ ರೈ ಯಾರು, ಅವರ ಹಿನ್ನಲೆಯೇನು