Publish Date: Sun, 31 Jan 2021 (16:44 IST)
Updated Date: Sun, 31 Jan 2021 (16:48 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರ ಅಭಿನಯದ ಆಚಾರ್ಯ ಹಾಗೂ ವಿಕ್ಟರಿ ವೆಂಕಟೇಶ್ ಅಭಿನಯದ ನಾರಪ್ಪ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಇತ್ತೀಚೆಗೆ ರಾಮ್ ಚರಣ್ ಅವರು ಮೇ 13ರಂದು ಚಿತ್ರಂದಿರಗಳಲ್ಲಿ ಆಚಾರ್ಯ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮೂಲಕ ಘೋಷಿಸಿದ್ದಾರೆ. ಆದರೆ ಇದಕ್ಕೂ ಒಂದು ಗಂಟೆಗಳ ಮೊದಲು ಮೇ14 ರಂದು ನಾರಪ್ಪ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಸುರೇಶ್ ಪ್ರೊಡಕ್ಷನ್ಸ್ ಪ್ರಕಟಿಸಿದೆ. ಇದರಿಂದ ಈ ಎರಡು ಚಿತ್ರಗಳ ಬಿಡುಗಡೆಯ ದಿನದ ನಡುವೆ ಒಂದು ದಿನದ ಅಂತರವಿರುವ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಘರ್ಷಣೆಯಾಗಲಿದೆ ಎನ್ನಲಾಗಿದೆ.