Select Your Language

Notifications

webdunia
webdunia
webdunia
webdunia

ಸುರೇಂದರ್ ರೆಡ್ಡಿ-ಅಖಿಲ್ ಅಕ್ಕಿನೇನಿ ಕಾಂಬೋ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ನಟಿ

ಸುರೇಂದರ್ ರೆಡ್ಡಿ-ಅಖಿಲ್ ಅಕ್ಕಿನೇನಿ ಕಾಂಬೋ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ನಟಿ
ಹೈದರಾಬಾದ್ , ಮಂಗಳವಾರ, 26 ಜನವರಿ 2021 (09:47 IST)
ಹೈದರಾಬಾದ್ : ಸ್ಟಾರ್ ನಿರ್ದೇಶಕ ಸುರೇಂದರ್ ರೆಡ್ಡಿ-ಅಖಿಲ್ ಅಕ್ಕಿನೇನಿ ಕಾಂಬೋ ಚಿತ್ರವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಆದರೆ ಚಿತ್ರದ ನಾಯಕಿ ಯಾರು ಎಂಬ ಗೊಂದಲವಿದ್ದು, ಇದೀಗ ಹೊಸ ಮುಖವನ್ನು ಹುಡುಕಲು ಹೊರಟ ನಿರ್ದೇಶಕರು ಮುಂಬೈ ಬ್ಯೂಟಿ ಬಗ್ಗೆ ಗಮನಹರಿಸಿದ್ದಾರೆ  ಎನ್ನಲಾಗಿದೆ.

ಮಾಡೆಲಿಂಗ್ ನಲ್ಲಿ ಉತ್ತಮ ಸಾಧನೆ ತೋರಿದ ಸಾಕ್ಷಿ ಎನ್ನುವವರು ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಸಾಕ್ಷಿ ನಟಿಸಿರುವ ಕೆಲವು ಜಾಹೀರಾತು, ಚಲನಚಿತ್ರಗಳನ್ನು ನೋಡಿದ ಸುರೇಂದರ್ ರೆಡ್ಡಿ , ಅವರ ಇನ್ ಸ್ಟಾಗ್ರಾಂ ಚಿತ್ರಗಳನ್ನು ಸಹ ಪರಿಶೀಲಿಸಿದ್ದಾರಂತೆ. ಆಕೆಯನ್ನು ಹೈದರಾಬಾದ್ ಗೆ ಆಡಿಷನ್ ಗೆ ಕರೆಸಲಾಗಿದೆಯಂತೆ.

ಸಾಕ್ಷಿ ನಟನೆ ಸುರೇಂದರ್ ರೆಡ್ಡಿ ಇಷ್ಟವಾಗಿದ್ದು, ಅಖಿಲ್ ಗೆ ಜೋಡಿಯಾಗಿ ನಟಿಸಲಿದ್ದಾರಂತೆ. ಈ ಬಗ್ಗೆ ನಿರ್ದೇಶಕರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳಿಗೆ ದಾಸ ದರ್ಶನ್ ರಿಂದ ವಿಶೇಷ ಮನವಿ