Publish Date: Mon, 25 Jan 2021 (13:45 IST)
Updated Date: Mon, 25 Jan 2021 (13:46 IST)
ಹೈದರಾಬಾದ್ : ಜನರು ಹೆಚ್ಚಾಗಿ ಜಾತಿ, ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಖಳನಾಯಕನಾಗಿ ಪಾತ್ರವನ್ನು ನಿರ್ವಹಿಸುವುದರ ಮೂಲಕ ಜನರಿಗೆ ಪರಿಚಿತರಾಗಿದ್ದ ನಟ ಜಗಪತಿ ಬಾಬು ಅವರು ಇದೀಗ ಜಾತಿ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ನಡೆದ ಜಾತಿ ವಿಚಾರದ ಬಗೆಗಿನ ಸಂದರ್ಶನವೊಂದರಲ್ಲಿ ಅವರು ಜಾತಿ ಹೆಸರಿನಲ್ಲಿ ತಾರತಮ್ಯ ಮಾಡುವುದನ್ನು ವಿಷಾದಿಸಿದ್ದಾರೆ. ಹಾಗೇ ಇತ್ತೀಚೆಗೆ ಅವರು ತಮ್ಮ ಚಿತ್ರವೊಂದರ ಪ್ರಚಾರದ ವೇಳೆ ನಿರ್ಮಾಪಕರು ಜಗಪತಿ ಬಾಬು ಅವರನ್ನು ಚೌಧರಿ ಎಂದು ಉಲ್ಲೇಖಿಸಿದ್ದಾರೆ. ಆಗ ಜಗಪತಿ ಬಾಬು ತನ್ನನ್ನು ಚೌಧರಿ ಎಂದು ಕರೆಯಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಅವರು ಜಾತಿವಾದಕ್ಕೆ ವಿರುದ್ಧವಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.