Select Your Language

Notifications

webdunia
webdunia
webdunia
webdunia

ಮಗುವಿನ ಜೀವ ಉಳಿಸಿ ನಿಜವಾದ ನಾಯಕ ಎನಿಸಿಕೊಂಡ ನಟ ಸೋನು ಸೂದ್

ಮಗುವಿನ ಜೀವ ಉಳಿಸಿ ನಿಜವಾದ ನಾಯಕ ಎನಿಸಿಕೊಂಡ ನಟ ಸೋನು ಸೂದ್
ಹೈದರಾಬಾದ್ , ಮಂಗಳವಾರ, 26 ಜನವರಿ 2021 (09:43 IST)
ಹೈದರಾಬಾದ್ : ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಸಹಾಯಕ್ಕೆ ನಿಂತ ಬಾಲಿವುಡ್ ನಟ ಸೋನು ಸೂದ್ ಅವರು ಲಾಕ್ ಡೌನ್ ಬಳಿಕವು ತನ್ನ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಅವರು ಮಗುವಿನ ಜೀವ ಉಳಿಸಿ ನಿಜವಾದ ನಾಯಕ ಎನಿಸಿಕೊಂಡಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ಅನ್ನದೇವರಪೇಟೆಯ ಕಾರ್ಮಿಕ ದಂಪತಿ ರಮಣ ವೆಂಕಟೇಶ್ವರ ರಾವ್ ಮತ್ತು ದೇವಿ ಅವರ  8 ತಿಂಗಳ ಮಗು ಹೃದಯದ ಸಮಸ್ಯೆಯಿಂದ ಬಳಲುತ್ತಿತ್ತು. ಈ ಬಗ್ಗೆ ಯುವಕನೊಬ್ಬ ಸೋನು ಸೂದ್ ನಡೆಸುತ್ತಿದ್ದ ಟ್ರಸ್ಟೊಂದಕ್ಕೆ ಈ ಬಗ್ಗೆ ಮಾಹಿತಿ ನೀಡಿ ನೆರವು ಕೋರಿದ್ದಾರೆ.

ಈ ವಿಚಾರ ತಿಳಿದ ಸೋನು ಸೋದ್ ಅವರು ಕೂಡಲೇ ಮುಂಬೈನ ನಾರಾಯಣ ಹಾರ್ಟ್ ಆಸ್ಪತ್ರೆಗೆ ಸಾಗಿಸಿ ಮಗುವಿಗೆ ಸ್ವಂತ ಹಣದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಜೀವ ಉಳಿಸಿದ್ದಾರೆ. ಇಂತಹ ಮಹಾನ್ ಕಾರ್ಯ ಮಾಡಿದ ನಟನನ್ನು ನೆಟಿಜನ್ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣರಾಜ್ಯೋತ್ಸವಕ್ಕೆ ಶುಭ ಕೋರಿದ ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್