ಬೆಂಗಳೂರು: ಇತ್ತೀಚೆಗಷ್ಟೇ ಮದುವೆಯಾಗಿದ್ದ ಸ್ಯಾಂಡಲ್ ವುಡ್ ಜೋಡಿ ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಈಗ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮೂಡ್ ನಲ್ಲಿದ್ದಾರೆ. ಇದೀಗ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹನಿಮೂನ್ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಬೀಚ್ ಸ್ಟೇ ಹೋಂನಲ್ಲಿ ಕಾಲ ಕಳೆಯುತ್ತಿರುವ ಸೋನಲ್ ಮತ್ತು ತರುಣ್ ತಮ್ಮ ಏಕಾಂತದ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ತರುಣ್ ಇನ್ ಸ್ಟಾಗ್ರಾಂನಲ್ಲಿ ಪತ್ನಿಯ ಬೋಲ್ಡ್ ಫೋಟೋವೊಂದನ್ನು ಪ್ರಕಟಿಸಿದ್ದು, ಸಂಗೀತವೇ ಪ್ರೀತಿಯ ಭಾಷೆ ಎಂದು ಬರೆದುಕೊಂಡಿದ್ದಾರೆ.
ಕಡಲತಡಿಯಲ್ಲಿ ಮರಳಿನ ಮೇಲೆ ಸೋನಲ್ ಸ್ವಿಮ್ ಸೂಟ್ ನಲ್ಲಿರುವ ಫೋಟೋವನ್ನು ತರುಣ್ ಹಂಚಿಕೊಂಡಿದ್ದಾರೆ. ಸೋನಲ್ ಮತ್ತು ತರುಣ್ ಮದುವೆಯಾಗಿ ಒಂದೂವರೆ ತಿಂಗಳ ಬಳಿಕ ತಮ್ಮ ಕನಸಿನ ತಾಣ ಮಾಲ್ಡೀವ್ಸ್ ಗೆ ಹನಿಮೂನ್ ಗೆ ಹೋಗಿದ್ದಾರೆ. ಇದೀಗ ತಮ್ಮ ಮೆಚ್ಚಿನ ತಾಣದಲ್ಲಿ ಇಬ್ಬರೂ ಸುಂದರ ಕ್ಷಣ ಕಳೆಯುತ್ತಿದ್ದಾರೆ.
ಇದಕ್ಕೆ ಮೊದಲು ತರುಣ್ ಮತ್ತು ಸೋನಲ್ ದುಬೈಗೆ ತೆರಳಿದ್ದು ಐಐಎಫ್ಎ ಅವಾರ್ಡ್ ಕಾರ್ಯಕ್ರಮದಲ್ಲೂ ಭಾಗಿಯಾಗಿತ್ತು. ಈ ಬಾರಿ ಐಐಎಫ್ಎ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಟೇರ ಸಿನಿಮಾ ನಿರ್ದೇಶನಕ್ಕಾಗಿ ತರುಣ್ ಸುಧೀರ್ ಪ್ರಶಸ್ತಿ ಪಡೆದುಕೊಂಡಿದ್ದರು. ಅದಾದ ಬಳಿಕ ಈಗ ಸಿನಿಮಾಗಳಿಂದ ಬ್ರೇಕ್ ಪಡೆದು ಖಾಸಗಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದಾರೆ.