Webdunia - Bharat's app for daily news and videos

Install App

ಪತ್ರದ ಮೂಲಕ ಸಮಂತಾ ಧನ್ಯವಾದ

Webdunia
ಭಾನುವಾರ, 20 ನವೆಂಬರ್ 2022 (15:58 IST)
ನಟಿ ಸಮಂತಾ​ ಅಭಿನಯದ ಯಶೋದಾ ಚಿತ್ರ ನವೆಂಬರ್​​​​ 11 ರಂದು ತೆರೆಗೆ ಬಂದಿತ್ತು. ಚಿತ್ರ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಬಾಕ್ಸ್​ ಆಫೀಸ್​ನಲ್ಲಿ ಯಶೋದಾ ಚಿತ್ರ ಸಖತ್​ ಕಮಾಯಿ ಮಾಡುತ್ತಿದೆ. ಮಹಿಳಾ ಪ್ರಧಾನವಾದ ಈ ಚಿತ್ರವನ್ನು ಹರೀಶ್​ ನಿರ್ದೇಶನ ಮಾಡಿದ್ದಾರೆ. ತೆಲುಗು ಸೇರಿದಂತೆ ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲೂ ಚಿತ್ರ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕಾಗಿ ನಟಿ ಸಮಂತಾ ಸಾಕಷ್ಟು ಹಾರ್ಡ್​ ವರ್ಕ್​ ಮಾಡಿದ್ದು, ಎರಡು ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಆರೋಗ್ಯದ ಸಮಸ್ಯೆ ಇದ್ದರೂ ಅವರು ಚಿತ್ರಕ್ಕೆ ಡಬ್​ ಮಾಡಿದ್ದರು. ಚಿತ್ರದ ಪ್ರಚಾರಕ್ಕೆ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇಷ್ಟೆಲ್ಲಾ ತೊಂದರೆಗಳ ನಡುವೆ ಸಮಂತಾ ಫ್ಯಾನ್ಸ್​​ ಅವರ ಕೈಬಿಟ್ಟಿಲ್ಲ. ಯಶೋದಾ ಚಿತ್ರವನ್ನು ಗೆಲ್ಲಿಸಿದ್ದಾರೆ. ಸದ್ಯ ನಟಿ ಸಮಂತಾ ತನ್ನ ಅಭಿಮಾನಿಗಳಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ. ಅತ್ಯಂತ ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಗಳಿಕೆ ಮಾಡಿದೆ. ನಿರ್ಮಾಪಕರ ಊಹೆಗೆ ಮೀರಿ ಈ ಚಿತ್ರ ಗಳಿಕೆ ಮಾಡುತ್ತಿದೆ. ಹೀಗಾಗಿ ಯಶೋದಾ ಚಿತ್ರ ತಂಡ ಗೆಲುವಿನ ಖುಷಿಯಲ್ಲಿದೆ. ಚಿತ್ರದ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗಾಗಿ ಸಮಂತಾ ಭಾವನಾತ್ಮಕ ಪತ್ರವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸ್ನೇಹಿತನ ಮೊಬೈಲ್‌ನಿಂದ ನಟಿ ರಮ್ಯಾಗೆ ಅಶ್ಲೀಲ ಸಂದೇಶ: ಪೊಲೀಸರ ಅತಿಥಿಯಾದ ಕೆ.ಆರ್.ಪುರದ ಯುವಕ

ರಾತ್ರೋರಾತ್ರಿ ವಿಷ್ಣು ಸ್ಮಾರಕ ನೆಲಸಮ, ಹಬ್ಬದ ದಿನವೇ ಕಣ್ಣೀರು ಹಾಕುತ್ತಿರುವ ವಿಷ್ಣುವರ್ಧನ್ ಫ್ಯಾನ್ಸ್‌

ಪಾರ್ಕಿಂಗ್ ವಿಷಯಕ್ಕೆ ಕಿರಿಕ್, ಪ್ರಾಣ ಕಳೆದುಕೊಂಡ ಖ್ಯಾತ ನಟಿ ಹುಮಾ ಖುರೇಷಿ ಸಹೋದರ

ಕಾಂತಾರ ಚಾಪ್ಟರ್‌ 1ರಲ್ಲಿ ರಿಷಭ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ: ಅಕ್ಟೋಬರ್‌ 2ರಂದು ಸಿನಿಮಾ ತೆರೆಗೆ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಮುಂದಿನ ಸುದ್ದಿ
Show comments