Select Your Language

Notifications

webdunia
webdunia
webdunia
webdunia

ಲಿಫ್ಟ್ ನಲ್ಲಿ ದಳಪತಿ ವಿಜಯ್ ಜೊತೆ ತ್ರಿಶಾ: ಇದೆಲ್ಲಾ ಅದೇ ಅಂತಿದ್ದಾರೆ ಫ್ಯಾನ್ಸ್

Thalapathy Vijay-Trisha

Krishnaveni K

ಚೆನ್ನೈ , ಗುರುವಾರ, 27 ಜೂನ್ 2024 (11:19 IST)
Photo Credit: X
ಚೆನ್ನೈ: ಇದೀಗ ತಾನೇ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಳಪತಿ ವಿಜಯ್ ಜೊತೆಗೆ ಲಿಫ್ಟ್ ನಲ್ಲಿರುವ ಸೆಲ್ಫೀ ಫೋಟೋವೊಂದನ್ನು ನಟಿ ತ್ರಿಶಾ ಕೃಷ್ಣನ್ ಪ್ರಕಟಿಸಿದ್ದು ಇವರಿಬ್ಬರ ನಡುವೆ ಏನೋ ಇದೆ ಎಂದು ಫ್ಯಾನ್ಸ್ ಮಾತನಾಡಿಕೊಳ್ಳುವಂತಾಗಿದೆ.

ದಳಪತಿ ವಿಜಯ್ ಮತ್ತು ಸಂಗೀತಾ ದಾಂಪತ್ಯ ಮುರಿದು ಬಿದ್ದಿದೆ ಎಂಬ ಸುದ್ದಿ ಹಲವು ಸಮಯದಿಂದ ಹರಿದಾಡುತ್ತಲೇ ಇದೆ. ಈ ನಡುವೆ ತ್ರಿಶಾ ಜೊತೆ ವಿಜಯ್ ಸ್ನೇಹ ಸಂಬಂಧ ಗಾಢವಾಗಿದೆ ಎಂಬ ಸುದ್ದಿ ಹಬ್ಬಿತ್ತು. ಲಿಯೋ ಸಿನಿಮಾ ವೇಳೆ ಇಬ್ಬರೂ ವಿದೇಶದಲ್ಲಿ ಜೊತೆಗೇ ಶಾಪಿಂಗ್ ಮಾಡಿರುವ ಫೋಟೋ ವೈರಲ್ ಆಗಿತ್ತು.

ಮೊನ್ನೆಯಷ್ಟೇ ವಿಜಯ್ ಹುಟ್ಟುಹಬ್ಬವಿತ್ತು. ಆ ದಿನ ತ್ರಿಶಾ ವಿಜಯ್ ಜೊತೆಗೆ ಲಿಫ್ಟ್ ನಲ್ಲಿರುವ ಸೆಲ್ಫೀಯೊಂದನ್ನು ಪ್ರಕಟಿಸಿ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದರು. ಲಿಫ್ಟ್ ನಲ್ಲಿ ಇಬ್ಬರ ಸೆಲ್ಫೀ ಫೋಟೋ ನೋಡಿ ಜನ ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಪಕ್ಕಾ ಎನ್ನುತ್ತಿದ್ದಾರೆ.

ದಳಪತಿ ವಿಜಯ್ ಇತ್ತೀಚೆಗಷ್ಟೇ ರಾಜಕೀಯ ಪಕ್ಷ ಘೋಷಣೆ ಮಾಡಿದ್ದರು. ಕೆಲವು ಸಮಯ ಸಿನಿಮಾಗಳಿಂದ ಬ್ರೇಕ್ ಪಡೆಯಲಿದ್ದಾರೆ ಎಂಬ ಸುದ್ದಿಯಿದೆ. ಈ ನಡುವೆ ವಿಜಯ್ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯಿತ್ತು. ಅದರ ನಡುವೆ ತ್ರಿಶಾ ಜೊತೆ ಡೇಟಿಂಗ್ ರೂಮರ್ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಕಿ 2898 ಎಡಿ ಸಿನಿಮಾ ಹೇಗಿದೆ, ಮೊದಲ ದಿನದ ಪ್ರತಿಕ್ರಿಯೆ