ಬೆಂಗಳೂರು: ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ಬಹುತಾರಾಗಣವಿರುವ ಬಹುರನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿ ಇಂದು ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ.
ಸೈನ್ಸ್ ಫಿಕ್ಷನ್ ಶೈಲಿಯ ಸಿನಿಮಾ ಬಗ್ಗೆ ಜನರಲ್ಲಿ ಭಾರೀ ನಿರೀಕ್ಷೆಯಿದೆ. ಮೊದಲ ದಿನದ ಶೋ ನೋಡಿದ ಪ್ರೇಕ್ಷಕರು ಸಿನಿಮಾ ನಿರಾಸೆ ಮಾಡಿಲ್ಲ. ಇದು ಮಾಮೂಲು ಕತೆಗಿಂತ ವಿಭಿನ್ನವಾಗಿದೆ. ಕಲ್ಕಿಯ ದೃಶ್ಯ ವೈಭವವನ್ನು ಥಿಯೇಟರ್ ನಲ್ಲೇ ನೋಡಿದರೆ ಅದರ ಮಜವೇ ಬೇರೆ.
ಪ್ರಭಾಸ್, ನಾಗ್ ಅಶ್ವಿನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಎಲ್ಲರ ಗಮನ ಸೆಳೆಯುವುದು ಅಮಿತಾಭ್ ಬಚ್ಚನ್. ಅವರು ತಮ್ಮ ಅದ್ಭುತ ಅಭಿನಯವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ. ಕೊನೆಯ 30 ನಿಮಿಷಗಳು ಪ್ರೇಕ್ಷಕರಿಗೆ ಮೈ ರೋಮಾಂಚನಗೊಳ್ಳುವಂತೆ ಮಾಡುತ್ತದೆ.
ಈ ಸಿನಿಮಾ ನೋಡುತ್ತಿದ್ದರೆ ಹಾಲಿವುಡ್ ಫೀಲ್ ಆಗುತ್ತಿದೆ ಎಂದಿದ್ದಾರೆ ಪ್ರೇಕ್ಷಕರು. ಮೊದಲ ದಿನವೇ ಮಿನಿಮಮ್ 200 ಕೋಟಿ ಕಲೆಕ್ಷನ್ ಮಾಡಲಿದೆ, ಟೋಟಲ್ 2000 ಕೋಟಿ ರೂ. ಕಲೆಕ್ಷನ್ ಮಾಡುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಪ್ರೇಕ್ಷಕರು. ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ಸಿನಿಮಾಗಳೇ ಬಿಡುಗಡೆಯಾಗಿಲ್ಲ. ಹೀಗಾಗಿ ಕಲ್ಕಿ ಸಿನಿಮಾಗೆ ಕರ್ನಾಟಕದಲ್ಲೂ ಜನ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.