Select Your Language

Notifications

webdunia
webdunia
webdunia
Monday, 7 April 2025
webdunia

ದರ್ಶನ್ ಬಂಧನದಿಂದ ಚಿತ್ರರಂಗ ಮಾನಸಿಕವಾಗಿ ಕುಗ್ಗಿದೆ: ನಟಿ ಶೃತಿ

Darshan Arrest

Sampriya

ಬೆಂಗಳೂರು , ಬುಧವಾರ, 26 ಜೂನ್ 2024 (19:51 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ನಟಿ ಶೃತಿ ಅವರು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಅವರು ಕೊಲೆ ಪ್ರಕರಣದಲ್ಲಿಸಿಕ್ಕಿಕೊಂಡಿರುವುದು ಕೇಳಿ ನೋವಾಯಿತು. ನಿಜ ಜೀವನದಲ್ಲಿ ತುಂಬಾನೇ ಸರಳ ವ್ಯಕ್ತಿತ್ವ. ಸ್ಟಾರ್ ಡಮ್ ಇದ್ರೂನೂ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತಿದ್ದರು.  ಕಷ್ಟದ ಜೀವನದಿಂದ ಮೇಲೆ ಬಂದಿರುವ ದರ್ಶನ್ ಅವರು ತುಂಬಾ ಶ್ರಮಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರದು ಅನ್ನೋ ಜವಾಬ್ದಾರಿ ಅವರಿಗೆ ಇತ್ತು.

ಇನ್ನೂ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ದುಡುಕಿದರು ಎಂದೇನಿಸುತ್ತದೆ.  ಸದ್ಯ ವಿಚಾರಣೆ ನಡೆಯುತ್ತಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ.  ಈ ಘಟನೆಯಿಂದ ಚಿತ್ರರಂಗ ಮಾನಸಿಕವಾಗಿ ಕುಗ್ಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್‌ಗೆ ಕೇಡು ಬಯಸುವವರನ್ನು ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ: ವಿಜಯಲಕ್ಷ್ಮೀ ಪೋಸ್ಟ್‌