Select Your Language

Notifications

webdunia
webdunia
webdunia
webdunia

ಪ್ರಭಾಸ್‌ ಅಭಿನಯದ ಕಲ್ಕಿ ಚಿತ್ರದ ಟ್ರೈಲರ್‌ ಬಿಡುಗಡೆ: ಹಾಲಿವುಡ್‌ ರೇಂಜ್‌ ಎಂದ ಫ್ಯಾನ್ಸ್‌

ಪ್ರಭಾಸ್‌ ಅಭಿನಯದ ಕಲ್ಕಿ ಚಿತ್ರದ ಟ್ರೈಲರ್‌ ಬಿಡುಗಡೆ: ಹಾಲಿವುಡ್‌ ರೇಂಜ್‌ ಎಂದ ಫ್ಯಾನ್ಸ್‌

Sampriya

ಹೈದರಾಬಾದ್ , ಮಂಗಳವಾರ, 11 ಜೂನ್ 2024 (14:30 IST)
Photo Courtesy X
ಹೈದರಾಬಾದ್: ‌ಟಾಲಿವುಡ್‌ನ ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡುತ್ತಿದೆ. ನಾಗ್‌ ಅಶ್ವಿನ್‌ ನಿರ್ದೇಶನ ಈ ಸಿನಿಮಾ ಹಾಲಿವುಡ್‌ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಭಾಸ್‌ ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ನಟಿಸಿರುವ ಈ ಚಿತ್ರದ ಟ್ರೈಲರ್ ಸೋಮವಾರ ರಾತ್ರಿ ಬಿಡುಗಡೆಯಾಗಿದೆ. ವೈಜಯಂತಿ ಮೂವೀಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಟ್ರೈಲರ್‌ ರಿಲೀಸ್‌ ಮಾಡಲಾಗಿದ್ದು, ದಾಖಲೆಯ ವೀಕ್ಷಣೆಯನ್ನು ಕಂಡು ಮುನ್ನುಗ್ಗುತ್ತಿದೆ.

ಈ ಟ್ರೈಲರ್‌ ಎರಡು ನಿಮಿಷ ಮತ್ತು ಐವತ್ತೊಂದು ಸೆಕೆಂಡ್‌ ಇದೆ. ವಿಎಫ್‌ಎಕ್ಸ್‌ನಿಂದಲೇ ನೋಡುಗರ ಗಮನ ಸೆಳೆದ ಈ ಸಿನಿಮಾ ತೆಲುಗು ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

‌ಈ ಟ್ರೈಲರ್‌ನಲ್ಲಿ ಕಮಲ್‌ ಹಾಸನ್‌ ಪ್ರಮುಖ ಹೈಲೈಟ್‌ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ. ಉಳಿದಂತೆ ಪ್ರಭಾಸ್‌ ಅಭಿಮಾನಿಗಳು ಟ್ರೇಲರ್‌ ಅನ್ನು ಹಾಡಿ ಹೊಗಳಿದ್ದಾರೆ.  ‌‌ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಸಂಸಾರದಲ್ಲಿ ಮೂಗು ತೂರಿಸಿದ್ದ, ಹತ್ಯೆಗೂ ಮುನ್ನ ದರ್ಶನ್ ನಮ್ ಬಾಸ್ ಎಂದಿದ್ದ ರೇಣುಕಾಸ್ವಾಮಿ