Select Your Language

Notifications

webdunia
webdunia
webdunia
webdunia

3ಡಿ ಫಾರ್ಮೆಟ್​ನಲ್ಲಿ ತೆರೆಗೆ ಅಪ್ಪಲಿಸಲಿದೆ ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಕಲ್ಕಿ 2898 ಎಡಿ

Kalki 2898 AD

Sampriya

ಹೈದರಾಬಾದ್ , ಸೋಮವಾರ, 27 ಮೇ 2024 (16:01 IST)
Photo Courtesy X
ಹೈದರಾಬಾದ್‌:  ಟಾಲಿವುಡ್​ ರೆಬೆಲ್ ಸ್ಟಾರ್​ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇದೇ ಜೂನ್​ 27ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಸಿನಿಮಾ ಕುರಿತು ಚಿತ್ರತಂಡ ಬುಜ್ಜಿ ಕಾರನ್ನು ಪರಿಚಯಿಸಿದ ರೀತಿ ಕಂಡು, ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.

ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ರೆಬೆಲ್‌ ಸ್ಟಾರ್‌ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಹಾಕಿದೆ.

ಬುಜ್ಜಿ ಕಾರನ್ನು ತಮಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಕಲ್ಕಿ ಚಿತ್ರತಂಡ, ಈ ಮೂಲಕ ಸಿನಿರಸಿಕರನ್ನು ಮಾತ್ರವಲ್ಲದೇ ಉದ್ಯಮಿಗಳು, ರಾಜಕಾರಣಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವು ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಏಕಕಾಲಕ್ಕೆ ತೆರೆಕಾಣಲಿದೆ. ಸದ್ಯ ಈ ಸಿನಿಮಾ 3ಡಿ ಫಾರ್ಮೆಟ್​ನಲ್ಲಿಯೂ ರಿಲೀಸ್ ಆಗಲಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಬಿಗ್‌ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್‌ ಭೇಟಿ, ಮುಗಿಬಿದ್ದ ಅಭಿಮಾನಿಗಳು