Select Your Language

Notifications

webdunia
webdunia
webdunia
webdunia

ರಾಜ್ಯೋತ್ಸವದಂದೇ ಕನ್ನಡಕ್ಕೆ ಬರುತ್ತಿದೆ ಇಂಗ್ಲಿಷ್ ಡಬ್ ಸಿನಿಮಾ

ರಾಜ್ಯೋತ್ಸವದಂದೇ ಕನ್ನಡಕ್ಕೆ ಬರುತ್ತಿದೆ ಇಂಗ್ಲಿಷ್ ಡಬ್ ಸಿನಿಮಾ
ಬೆಂಗಳೂರು , ಬುಧವಾರ, 23 ಅಕ್ಟೋಬರ್ 2019 (09:13 IST)
ಬೆಂಗಳೂರು: ಡಬ್ಬಿಂಗ್ ಸಿನಿಮಾ ಎನ್ನುವುದು ಕೆಲವು ಸಮಯದ ಮೊದಲು ವಿವಾದದ ಕೇಂದ್ರ ಬಿಂದುವಾಗಿತ್ತು. ಆದರೆ ಈಗ ಬೇರೆ ಭಾಷೆಯ ಸಿನಿಮಾಗಳು ಏಕಕಾಲಕ್ಕೆ ಬಹುಭಾಷೆಗಳಲ್ಲಿ ಬಿಡುಗಡೆಯಾಗುವುದು ಅದು ಕನ್ನಡಕ್ಕೂ ಡಬ್ ಆಗುವುದು ಸಾಮಾನ್ಯವಾಗಿದೆ.


ಇದೀಗ ಇಂಗ್ಲಿಷ್ ಸಿನಿಮಾವೊಂದು ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ. ಈ ಸಿನಿಮಾದ ಟ್ರೈಲರ್ ನ್ನು ಸ್ವತಃ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.

‘ಟರ್ಮಿನೇಟರ್ ಡಾರ್ಕ್ ಫೇಟ್’ ಎನ್ನುವ ಇಂಗ್ಲಿಷ್ ಸಿನಿಮಾವೊಂದು ಕನ್ನಡವೂ ಸೇರಿದಂತೆ ತೆಲುಗು, ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಈ ಚಿತ್ರ ನವಂಬರ್ 1 ರಂದು ಅಂದರೆ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ನೀರೆ’ಯ ಹಿಂದೆ ಹೋದ ನಟ ಜಯರಾಮ್ ಕಾರ್ತಿಕ್