Select Your Language

Notifications

webdunia
webdunia
webdunia
webdunia

‘ನೀರೆ’ಯ ಹಿಂದೆ ಹೋದ ನಟ ಜಯರಾಮ್ ಕಾರ್ತಿಕ್

‘ನೀರೆ’ಯ ಹಿಂದೆ ಹೋದ ನಟ ಜಯರಾಮ್ ಕಾರ್ತಿಕ್
ಬೆಂಗಳೂರು , ಬುಧವಾರ, 23 ಅಕ್ಟೋಬರ್ 2019 (09:04 IST)
ಬೆಂಗಳೂರು: ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಹಲವು ದಿನಗಳ ಬಳಿಕ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ಜೆಕೆ ಹೊಸ ಸಿನಿಮಾಗೆ ‘ನೀರೆ’ ಎಂದು ಟೈಟಲ್ ಕೂಡಾ ಫಿಕ್ಸ್ ಆಗಿದೆ. ನೀರೆ ಟೈಟಲ್ ಜತೆಗೆ ಲವ್ ವಿತ್ ರೈನ್ ಎಂಬ ಅಡಿಬರಹವೂ ಇದೆ. ಅಲ್ಲಿಗೆ ಇದೊಂದು ಪಕ್ಕಾ ಲವ್ ಸ್ಟೋರಿ ಎನ್ನುವುದು ಕನ್ ಫರ್ಮ್.

ಹಿಂದಿ ಧಾರವಾಹಿ, ರಿಯಾಲಿಟಿ ಶೋ ನಲ್ಲಿ ತೀರ್ಪುಗಾರನಾಗಿ ಕೆಲಸ ಮಾಡುತ್ತಿರುವ ಜೆಕೆ ಕೆಲವು ದಿನಗಳ ಬ್ರೇಕ್ ನ ನಂತರ ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಉಳಿದ ಡೀಟೈಲ್ಸ್ ಸದ್ಯದಲ್ಲೇ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಳಿಪಟ 2 ಜೋಡಿ ಜೀವಗಳ ಪರಿಚಯ ಮಾಡಿದ ಯೋಗರಾಜ್ ಭಟ್