Select Your Language

Notifications

webdunia
webdunia
webdunia
webdunia

ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ

ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ
ಚೆನ್ನೈ , ಬುಧವಾರ, 30 ಸೆಪ್ಟಂಬರ್ 2020 (11:53 IST)
ಚೆನ್ನೈ : ಆರ್ಥಿಕ ಸಮಸ್ಯೆ ಹಾಗೂ ಕುಟುಂಬ ಕಲಹಕ್ಕೆ ನೊಂದು ತಮಿಳಿನ ಮರಿನಾ ಸಿನಿಮಾ ನಟ ತೆನ್ನರಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಟ ತೆನ್ನರಸುಗೆ ಮದುವೆಯಾಗಿದ್ದು, 2 ವರ್ಷದ ಮಗುವಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ನಟ ಆಗಾಗ ಕುಟುಂಬದವರ ಜೊತೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಆದರೆ  ಈ ಸಮಸ್ಯೆಗಳಿಂದ ಬೇಸತ್ತ ನಟ ಮಂಗಳವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ನಟ ಶಿವಕಾರ್ತಿಕೇಯನ್ ಹಾಗೂ ಒಲಿವಿಯಾ ನಟಿಸಿದ್ದ ಮರಿನಾ ಸಿನಿಮಾದಲ್ಲಿ ನಟನ ಆಪ್ತ ಗೆಳೆಯನಾಗಿ ನಟಿಸಿ ಖ್ಯಾತಿ ಗಳಿಸಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸೂರ್ಯರವರ ಚೆನ್ನೈನ ಕಚೇರಿಗೆ ಹುಸಿ ಬಾಂಬ್ ಕರೆ