Publish Date: Tue, 22 May 2018 (08:28 IST)
Updated Date: Tue, 22 May 2018 (08:38 IST)
ಚೆನ್ನೈ : ಕನ್ನಡಿಗರ ಮನಗೆದ್ದ ತಮಿಳು ನಟ ಸಿಂಬು ಅವರು ಇದೀಗ ತಮ್ಮ ಅಭಿಮಾನಿಯೊಬ್ಬರ ಸಾವಿಗೆ ವಿಭಿನ್ನವಾಗಿ ಸಂತಾಪ ಸೂಚಿಸುವುದರ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಹೌದು. ನಟ ಸಿಂಬು ಅವರ ಅಭಿಮಾನಿ ಮದನ್ ಎನ್ನುವವರು ಇತ್ತೀಚೆಗಷ್ಟೇ ಅನಾರೋಗ್ಯದಿಂದ ದುಬೈನಲ್ಲಿ ತೀರಿಕೊಂಡಿದ್ದರು. ಕೊನೆಯುಸಿರೆಳೆದ ಈ ಮದನ್ ಸಿಂಬು ಅಭಿಮಾನಿ ಬಳಗ ಸಂಘದ ಸದಸ್ಯ ಕೂಡ ಆಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಗಲಿದ ಅಭಿಮಾನಿಗೆ ಕಂಬನಿ ಮಿಡಿದು, ಅಭಿಮಾನಿಯ ಭಾವಚಿತ್ರ ಇರುವ ಪೋಸ್ಟರ್ ಗಳನ್ನು ಅಂಟಿಸಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ್ದಾರೆ. ಚೆನ್ನೈನ ಬೀದಿಯಲ್ಲಿ ಶೃದ್ಧಾಂಜಲಿ ಸಲ್ಲಿಸುವ ಪೋಸ್ಟರ್ ಗಳನ್ನು ಅಂಟಿಸುತ್ತಿರುವ ದೃಶ್ಯ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ