Publish Date: Wed, 02 May 2018 (09:17 IST)
Updated Date: Wed, 02 May 2018 (09:18 IST)
ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ಧೋನಿ ಮತ್ತೆ ಯಶಸ್ಸಿನ ಹಾದಿ ಹಿಡಿಯುತ್ತಿರುವುದು ನೋಡಿ ದ.ಆಫ್ರಿಕಾ ಮೂಲದ ಕ್ರಿಕೆಟಿಗ ಫಾ ಡು ಪ್ಲೆಸಿಸ್ ಮುಕ್ತ ಕಂಠದಿಂದ ಹೊಗಳಿಕೆ ನೀಡಿದ್ದಾರೆ.
ನಾಯಕನಾಗಿ ಸ್ವತಃ ನಿಂತು ಆಡುವ ಧೋನಿ ಯಾವುದೇ ಬೌಲರ್ ಗಳ ಬೆಂಡತ್ತುವುದು ನೋಡಿದರೆ ಬೇರೆ ನಾಯಕರಿಗೆ ಸಂಕಷ್ಟ ಗ್ಯಾರಂಟಿ ಎಂದು ಪ್ಲೆಸಿಸ್ ಹೇಳಿಕೊಂಡಿದ್ದಾರೆ.
ಕಳೆದೆರಡು ಪಂದ್ಯಗಳಲ್ಲಿ ಧೋನಿಯೇ ಅಂತ್ಯದವರೆಗೂ ನಿಂತು ತಮ್ಮ ತಂಡಕ್ಕೆ ಗೆಲುವು ಕೊಡಿಸಿದ್ದರು. ಧೋನಿ ವೃತ್ತಿ ಜೀವನವೇ ಮುಗಿಯಿತು ಎನ್ನುತ್ತಿರುವಾಗ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯನ್ನೂ ಮೀರಿಸುವ ರೀತಿ ಅವರು ಆಡುತ್ತಿರುವುದು ನೋಡಿ ಎಲ್ಲರೂ ಮತ್ತೆ ಧೋನಿ ಕಡೆಗೆ ಜೈಕಾರ ಹಾಕಲು ಶುರು ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.