Select Your Language

Notifications

webdunia
webdunia
webdunia
webdunia

ನಟ ಜಾಕಿ ಚಾನ್ ಮಗಳನ್ನು ಮನೆಯಿಂದ ಹೊರಗೆ ಹಾಕಿದ್ದು ಯಾಕೆ…?

ನಟ ಜಾಕಿ ಚಾನ್ ಮಗಳನ್ನು ಮನೆಯಿಂದ ಹೊರಗೆ ಹಾಕಿದ್ದು ಯಾಕೆ…?
ಮುಂಬೈ , ಸೋಮವಾರ, 21 ಮೇ 2018 (11:41 IST)
ಮುಂಬೈ: ನಟ ಜಾಕಿ ಚಾನ್ ತನ್ನ ಮಗಳನ್ನ ಮನೆಯಿಂದ ಹೊರಹಾಕಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯನ್ನು ಸ್ವತಃ ಜಾಕಿ ಚಾನ್ ಅವರ ಮಗಳೇ ಹೇಳಿದ್ದು, ಯೂಟ್ಯೂಬ್ ನಲ್ಲಿ ವಿಡಿಯೋ ಹರಿಯಬಿಟ್ಟಿದ್ದಾರೆ.


ವಿಡಿಯೋದಲ್ಲಿ ಮಾತನಾಡಿರುವ ಜಾಕಿ ಚಾನ್ ಪುತ್ರಿ ಎಟಾ ''ಒಂದು ತಿಂಗಳಿನಿಂದ ನಾನು ನನ್ನ ಹೆತ್ತವರಿಂದ ದೂರವಾಗಿದ್ದು, ನಿರಾಶ್ರಿತಳಾಗಿದ್ದೇನೆ. ಸದ್ಯ, ನನ್ನ ಗೆಳತಿ ಜೊತೆ ಇದ್ದು, ನಾವು ಬ್ರಿಡ್ಜ್ ಕೆಳಗೆ ರಾತ್ರಿಯನ್ನು ಕಳೆಯುತ್ತಿದ್ದೇವೆ. ಆಸ್ಪತ್ರೆ, ಪೊಲೀಸ್ ಠಾಣೆ, ಆಹಾರ ನಿಧಿ, ಲೈಂಗಿಕ ಅಲ್ಪಸಂಖ್ಯಾತರ ಸಹಾಯ ಕೇಂದ್ರಗಳಲ್ಲಿ ಸಹಾಯ ಕೇಳಿದರೂ, ಯಾರೂ ನಮ್ಮನ್ನು ಸೇರಿಸಿಕೊಳ್ಳಲಿಲ್ಲ. ನಮಗೆ ಈಗ ಏನೂ ಮಾಡಬೇಕೆಂಬುದು ತಿಳಿಯುತ್ತಿಲ್ಲ. ನಾವು ಎಷ್ಟು ಕಷ್ಟದಲ್ಲಿ ಇದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಲು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ'' ಎಂದು ಎಟಾ ಕಣ್ಣೀರು ಹರಿಸಿದ್ದಾರೆ.


ಎಟಾ ಸಲಿಂಗಕಾಮಿ ಎಂದು ಜಾಕಿ ಚಾನ್ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜಾಕಿ ಚಾನ್ ಪತ್ನಿ ಎಲೈನ್ ''ದುಡ್ಡಿನ ಅವಶ್ಯಕತೆ ಇದ್ದರೇ ಯಾವುದಾದರೂ ಕೆಲಸ ಹುಡುಕಿಕೊಂಡು ಬದುಕಿಲಿ. ಸುಮ್ಮನೆ ತಂದೆಯ ಹೆಸರಿಗೆ ಧಕ್ಕೆ ತರುವುದು ಬೇಡ. ಎಲ್ಲರೂ ದುಡಿದು ಜೀವನ ನಡೆಸುತ್ತಿದ್ದಾರೆ'' ಎಂದು ಖಾರವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸ್ವಾಗತ ನೀಡಿದ್ದು ಯಾವ ನಟಿಗೆ...?