Select Your Language

Notifications

webdunia
webdunia
webdunia
webdunia

ಒಂದು ವಿಡಿಯೋ ಮತದಾರನ ಮೈಂಡ್ ಬದಲಿಸಿದ್ದು ಹೇಗೆ ಗೊತ್ತಾ?

ಒಂದು ವಿಡಿಯೋ ಮತದಾರನ ಮೈಂಡ್ ಬದಲಿಸಿದ್ದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 15 ಮೇ 2018 (13:06 IST)
ಇದು ಸೋಶಿಯಲ್ ಮೀಡಿಯಾ ಕಾಲ.. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಒಂದು ವಿಡಿಯೋ ಚುನಾವಣೆಯ ದಿಕ್ಕನ್ನೇ ಬದಲಿಸಬಹುದು ಅನ್ನೋದು ಸಾಬೀತಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದ್ದ ಡಾ.ಕೆ.ಸುಧಾಕರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದು, ಆ ಗೆಲುವಿಗೆ ಒಂದು ವಿಡಿಯೋ ಕಾರಣ ಎನ್ನಲಾಗುತ್ತಿದೆ.
ಡಾ.ಕೆ.ಸುಧಾಕರ್ 2013ರಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರದ ಶಾಸಕರಾಗಿ ಆಯ್ಕೆಯಾಗಿದ್ದರು. ಯುವ ನಾಯಕ ಎನಿಸಿಕೊಂಡಿರೋ ಡಾ.ಕೆ.ಸುಧಾಕರ್, ಜನರ ಸಂಕಷ್ಟಗಳಿಗೆ ಸ್ಪಂದಿಸುವುದರ ಜೊತೆಗೆ, ಕ್ಷೇತ್ರದ ಜನರ ಸುಖ ದುಃಖಗಳಿಗೆ ಸ್ಪಂದಿಸುತ್ತಿದ್ದರು. ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಗಳನ್ನು ಜಾರಿಗೊಳಿಸಿದ್ದರು. ಇಷ್ಟಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಡಾ.ಕೆ.ಸುಧಾಕರ್ ತೇಜೋಮಾಡುವಂಥಾ ವಿಡಿಯೋಗಳನ್ನು ಹರಿಯ ಬಿಡಲಾಗಿತ್ತು. ಮೊದಲು ಕಾಂಗ್ರೆಸ್ ನಲ್ಲಿದ್ದು ನಂತರ ಬಂಡಾಯವೆದ್ದ ನವೀನ್ ಕಿರಣ್ ಮತ್ತು ಆತನ ಬೆಂಬಲಿಗರಲ್ಲಿ ಒಬ್ಬನಾದ ಪ್ರದೀಪ್ ಈಶ್ವರ್ ಮೊದಲಾದವರು, ರಾಜಕೀಯ ದುರುದ್ದೇಶದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಆರೋಪಗಳ ಸುರಿಮಳೆ ಸುರಿಸಿದ್ದರು. ವಿರೋಧಿಗಳ ಈ ಕುತಂತ್ರವನ್ನು ಅರಿಯದ ಜನ ಅವರ ಮಾತುಗಳನ್ನೇ ನಿಜವೆಂದು ಭಾವಿಸಿದ್ದರು. ಆದರೆ ಜನರ ಕಣ್ಣು ತೆರೆಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದಂಥಾ ವಿಡಿಯೋಗಳು
webdunia
ನಮ್ಮ ಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಿದ್ದಾರೆ. ನಮಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಕೃಷಿಗಾಗಿ ಬೆಂಗಳೂರಿನಿಂದ ನೀರನ್ನು ತರುತ್ತಿದ್ದಾರೆ. ವ್ಯಾಪಾರಿಗಳ ಸಮಸ್ಯೆಗಳನ್ನು ನಿವಾರಿಸಿದ್ದಾರೆ. ಹೀಗೆ ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿದ್ದಾರೆ ಎಂದು ಡಾ.ಕೆ.ಸುಧಾಕರ್ ಮಾಡಿದ ಜನಪರ ಕಾರ್ಯಗಳನ್ನು ಜನರೇ ಸೋಶಿಯಲ್ ಮೀಡಿಯಾಗಳ ಮುಂದೆ ಹೇಳೋಕೆ ಶುರು ಮಾಡಿದರು. ಇದರ ಜೊತೆಗೆ ಕಳೆದ ಐದು ವರ್ಷಗಳಲ್ಲಿ ಡಾ.ಕೆ.ಸುಧಾಕರ್ ಏನೇನು ಮಾಡಿದ್ದಾರೆ ಎಂದು ತೋರಿಸುವಂಥಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದ್ದವು.
webdunia

ಈ ವಿಡಿಯೊಗಳನ್ನು ನೋಡಿದ ಚಿಕ್ಕಬಳ್ಳಾಪುರದ ಜನತೆ ಡಾ.ಕೆ.ಸುಧಾಕರ್ ಮಾಡಿದ ಕೆಲಸಗಳನ್ನು ಮೆಚ್ಚಿ ಮತ್ತೊಮ್ಮೆ ಆಶೀರ್ವದಿಸಿದ್ದಾರೆ. ವಿರೋಧಿಗಳು ಡಾ.ಕೆ.ಸುಧಾಕರ್ ತೇಜೋವಧೆ ಮಾಡಲು ಯತ್ನಿಸಿದರೂ, ಡಾ.ಸುಧಾಕರ್ ಮಾಡಿದ ಸಹಾಯವನ್ನು ಬಿಚ್ಚಿಟ್ಟಂಥಾ ಜನರ ವಿಡಿಯೋಗಳು ಕೊನೆ ಕ್ಷಣದಲ್ಲಿ ಜನರ ಮನಸ್ಸನ್ನ ಬದಲಿಸಿತ್ತು. ಅಂತಿಮವಾಗಿ ವಿರೋಧಿಗಳ ಕುತಂತ್ರಕ್ಕೆ ಮಾರು ಹೋಗದೇ ಡಾ.ಕೆ.ಸುಧಾಕರ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿದರು ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆ.
 
(ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ)  https://www.facebook.com/DrSudhakarK.Official/videos/707470406108953/ 

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡೇಶ್ವರಿಯಲ್ಲಿ ಸೋತರು ಬಾದಾಮಿಯಲ್ಲಿ ಗೆಲುವು ಸಾಧಿಸಿದ ಸಿದ್ದರಾಮಯ್ಯ