Publish Date: Tue, 15 May 2018 (11:09 IST)
Updated Date: Tue, 15 May 2018 (11:11 IST)
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗಲಾಟೆ, ಹಿಂದೂ ಕಾರ್ಯಕರ್ತರ ಕೊಲೆಗಳ ಕಾರಣದಿಂದ ಸುದ್ದಿಯಲ್ಲಿದ್ದ ದ.ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮಂಗಳೂರಿನಲ್ಲಿ ಯುಟಿ ಖಾದರ್ ಬಿಟ್ಟರೆ ಉಳಿದೆಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ. ಪುತ್ತೂರಿನಲ್ಲಿ ಸಂಜೀವ್ ಮಠಂದೂರು ಎದುರು ಕಾಂಗ್ರೆಸ್ ನ ಶಕುಂತಲಾ ಶೆಟ್ಟಿ, ಬಂಟ್ವಾಳದಲ್ಲಿ ರಮಾನಾಥ ರೈ ಹಿನ್ನಡೆ ಸಾಧಿಸಿದ್ದಾರೆ. ಸುಳ್ಯದಲ್ಲಿ ಈಗಾಗಲೇ ಶಾಸಕ ಅಂಗಾರ ಗೆಲುವು ಸಾಧಿಸಿದ್ದಾರೆ. ಇನ್ನು ಉಡುಪಿ, ಕಾರ್ಕಳದಲ್ಲೂ ಜನರು ಬಿಜೆಪಿಗೆ ಒಲವು ತೋರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Tue, 15 May 2018 (11:09 IST)
Updated Date: Tue, 15 May 2018 (11:11 IST)