Publish Date: Tue, 15 May 2018 (10:41 IST)
Updated Date: Tue, 15 May 2018 (10:45 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲಿಲ್ಲವೆಂಬ ಕಾರಣಕ್ಕೆ ಟೀಕೆಗೊಳಗಾಗಿದ್ದ ಬಹುಭಾಷಾ ತಾರೆ ಪ್ರಕಾಶ್ ರೈ ಬಿಜೆಪಿಗೆ ಜನ ಅಧಿಕಾರ ಕೊಡಲ್ಲ ಎಂಬ ವಿಶ್ವಾಸ ನನ್ನದು ಎಂದಿದ್ದರು.
ಇತ್ತೀಚೆಗಿನ ದಿನಗಳಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರಕಾಶ್ ರೈ ಕರ್ನಾಟಕ ಫಲಿತಾಂಶದ ಬಗ್ಗೆ ನಿನ್ನೆ ತಡರಾತ್ರಿ ಟ್ವೀಟ್ ಒಂದನ್ನು ಮಾಡಿದ್ದರು.
‘ನಾಳೆ ಬರಲಿ.. ಕರ್ನಾಟಕದ ಜನ ಬಿಜೆಪಿ ಸರ್ಕಾರ ರಚಿಸಲು ಅವಕಾಶ ಕೊಡಲ್ಲ ಎಂದು ನಂಬಿದ್ದೇನೆ. ಇದು ದೇಶವೇ ಎಚ್ಚೆತ್ತುಕೊಳ್ಳುತ್ತಿರುವುದರ ಸಂಕೇತವಾಗಬಹುದು. ನಾವು ಜನರ ಜತೆಗೆ ನಿಲ್ಲುವುದನ್ನು ಮುಂದುವರಿಸಲಿದ್ದೇವೆ. ಯಾರೇ ಅಧಿಕಾರಕ್ಕೆ ಬಂದರೂ ಕಾರ್ಯಪ್ರವೃತ್ತರಾಗಲಿ’ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದರು. ಆದರೆ ಅವರಿಗೆ ತಿರುಗೇಟು ನೀಡುವಂತೆ ಜನರ ಉತ್ತರ ಬರುವ ಲಕ್ಷಣಗಳು ಕಂಡುಬರುತ್ತಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.