Publish Date: Tue, 15 May 2018 (10:31 IST)
Updated Date: Tue, 15 May 2018 (10:46 IST)
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಸಾಧನೆ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.
ಅವರು ಸಮೀಕ್ಷೆಗಳನ್ನು, ಕೆಲವರ ಹೇಳಿಕೆಗಳನ್ನು ಗಮನಿಸಿ ಅದುವೇ ಜನರ ತೀರ್ಮಾನ ಎಂಬ ಭ್ರಮೆಯಲ್ಲಿದ್ದರು. ಆದರೆ ನಾವು ನಿಜವಾಗಿಯೂ ಜನರ ನಾಡಿ ಮಿಡಿತವನ್ನು ಅರಿತು ಹೆಜ್ಜೆಯಿಟ್ಟಿದ್ದೇವೆ. ನಾವು ಬಹುಮತದೊಂದಿಗೆ ಸರ್ಕರ ರಚಿಸಿಯೇ ರಚಿಸುತ್ತೇವೆ ಎಂದು ಸದಾನಂದ ಗೌಡರು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದಕ್ಕಿಂತ ದುಪ್ಪಟ್ಟು ಯಶಸ್ಸು ಸಾಧಿಸಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.