Webdunia - Bharat's app for daily news and videos

Install App

ತಮಿಳು ಖ್ಯಾತ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

Krishnaveni K
ಶನಿವಾರ, 30 ಮಾರ್ಚ್ 2024 (09:56 IST)
Photo Courtesy: Twitter
ಚೆನ್ನೈ: ತಮಿಳಿನ ಖ್ಯಾತ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು.

ಚಿಕ್ಕವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿ ಚಿತ್ರರಂಗಕ್ಕೆ ಬಂದ ಡ್ಯಾನಿಯಲ್ ಬಳಿಕ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಮಿಂಚಿದ್ದರು. ಸಿನಿಮಾಗಳಲ್ಲದೇ ಧಾರವಾಹಿಗಳಲ್ಲೂ ಅಭಿನಯಿಸಿದ್ದರು.

ಗೌತಮ್ ಮೆನನ್ ನಿರ್ದೇಶನದ ನಟ ಸೂರ್ಯ ನಾಯಕರಾಗಿ ಅಭಿನಯಿಸಿದ್ದ ಕಾಕ ಕಾಕ ಸಿನಿಮಾಗೆ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.  ಕಮಲ್ ಹಾಸನ್ ಜೊತೆಗೆ ವೇಟ್ಟೈಯಾಡ್, ವಿಳಯಾಡ್,  ಮಮ್ಮುಟ್ಟಿ ಜೊತೆಗೆ ಬ್ಲ್ಯಾಕ್, ಮೋಹನ್ ಲಾಲ್ ಜೊತೆಗೆ ಭಗವಾನ್ ಸಿನಿಮಾಗಳಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದರು.

ತೀವ್ರ ಎದೆನೋವಿಗೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಇಂದು ಅಂತ್ಯಕ್ರಿಯೆ ನೆರವೇರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments