ಪವರ್ ಸ್ಟಾರ್ ಪುನೀತ್, ಮಿಲ್ಕಿ ಬ್ಯೂಟಿ ತಮನ್ನಾ ಕೂಡಾ ಮೆಚ್ಚಿಕೊಂಡಿದ್ದ ‘ಟೋಬಿ’ ಕತೆ!

Webdunia
ಶನಿವಾರ, 5 ಆಗಸ್ಟ್ 2023 (08:40 IST)
Photo Courtesy: Twitter
ಬೆಂಗಳೂರು: ರಾಜ್ ಬಿ ಶೆಟ್ಟಿ ನಟಿಸಿರುವ ಟೋಬಿ ಸಿನಿಮಾದ ಟ್ರೈಲರ್ ನಿನ್ನೆ ಲಾಂಚ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದಿದೆ. ಟೋಬಿ ಸಿನಿಮಾ ಕತೆ ಟಿ.ಕೆ. ದಯಾನಂದ್ ಅವರದ್ದು.

ಟ್ರೈಲರ್ ಲಾಂಚ್ ವೇಳೆ ಟಿ.ಕೆ. ದಯಾನಂದ್ ಟೋಬಿ ಕತೆ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಹಲವು ಇಂಟ್ರೆಸ್ಟಿಂಗ್ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ಕತೆ ಸ್ಪರ್ಧೆಯೊಂದಕ್ಕೆ ಟೋಬಿ ಕತೆಯನ್ನು ಕಳುಹಿಸಿದ್ದರಂತೆ ಟಿ.ಕೆ. ದಯಾನಂದ್. ಮೂರೂವರೆ ಲಕ್ಷಕ್ಕೂ ಅಧಿಕ ಕತೆಗಳು ಸ್ಪರ್ಧೆಯಲ್ಲಿದ್ದವು. ಆ ಪೈಕಿ ಟೋಬಿ ಗೆದ್ದಿತ್ತು. ಈ ಕತೆಯ ಬಗ್ಗೆ ಮಿಲ್ಕಿ ಬ್ಯೂಟಿ ತಮನ್ನಾ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ನೀವು ಈ ಕತೆಯನ್ನು ಏಕೆ, ಹೇಗೆ ಬರೆದೆಯೋ ಗೊತ್ತಿಲ್ಲ. ಆದರೆ ಟೋಬಿ ಕತೆ ನನ್ನನ್ನು ಬಹಳ ಕಾಡಿತು ಎಂದಿದ್ದರಂತೆ.

ಈ ಕತೆಯನ್ನು ಟಿ.ಕೆ. ದಯಾನಂದ್ ಮೊದಲು ಹೇಳಿದ್ದು ಪುನೀತ್ ರಾಜ್ ಕುಮಾರ್ ಗೆ. ಅವರಿಗೆ ಕತೆಯೂ ಇಷ್ಟವಾಗಿತ್ತು. ಆದರೆ ಈಗ ನಾನು ಫ್ಯಾಮಿಲಿ ಓರಿಯೆಂಟೆಡ್ ನಟ ಎಂದು ಗುರುತಿಸಿಕೊಂಡಿದ್ದೇನೆ. ಇಂತಹ ವಿಕ್ಷಿಪ್ತ ಪಾತ್ರವನ್ನು ಮಾಡಿದರೆ ಜನ ಒಪ್ಪಿಕೊಳ್ಳಲ್ಲ ಎಂದು ನಿರಾಕರಿಸಿದರಂತೆ. ಬಳಿಕ ರಿಷಬ್ ಶೆಟ್ಟಿಗೆ ಕತೆ ಹೇಳಿದಾಗ ಅವರು ಸಿನಿಮಾ ಮಾಡಲು ಒಪ್ಪಿಕೊಂಡರು. ಆದರೆ ಬಳಿಕ ಅವರು ಕಾಂತಾರದಲ್ಲಿ ಬ್ಯುಸಿಯಾದರು. ಹೀಗಾಗಿ ಕೊನೆಗೆ ರಾಜ್ ಬಿ ಶೆಟ್ಟಿ ಸಿನಿಮಾ ಮಾಡಿದರು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮೇಲಿನ ನನ್ನ ಗೌರವ ದ್ವಿಗುಣಗೊಂಡಿದೆ: ರಿಷಬ್ ಬಗ್ಗೆ ಖುಷ್ಬೂ ಸುಂದರ್ ಗುಣಗಾನ

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

ಪರಶುರಾಮನ ಪಾತ್ರಕ್ಕೆ ಮದ್ಯ, ನಾನ್ ವೆಜ್ ಬಿಟ್ಟ ವಿಕ್ಕಿ ಕೌಶಾಲ್: ಪತ್ನಿ ಜೊತೆ ಅದನ್ನೂ ಮಾಡ್ಬೇಡಿ ಎಂದ ನೆಟ್ಟಿಗರು

ಮೊದಲ ಮಗುವಿಗೆ ಜನ್ಮವಿತ್ತ ಕತ್ರಿನಾ ಕೈಫ್: ವಿಕ್ಕಿ ಕೌಶಾಲ್ ಮನೆಯಲ್ಲಿ ಸಂಭ್ರಮ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆ ಡೇಟ್ ಫಿಕ್ಸ್

ಮುಂದಿನ ಸುದ್ದಿ
Show comments