ಹೈದರಾಬಾದ್ : ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಿರ್ದೇಶಕ ಶಿವ ನಿರ್ಮಾಣದ ಸಂಯೋಜನೆಯಲ್ಲಿ ಮೂಡಿಬಂದ ತಕ್ ಜಗದೀಶ್ ಚಿತ್ರವನ್ನು ಎಪ್ರಿಲ್ 16ರಂದು ಬಿಡುಗಡೆ ಮಾಡುವುದಾಗಿ ತಯಾರಕರು ಈಗಾಗಲೇ ಘೋಷಿಸಿದ್ದಾರೆ.
ಆದರೆ ಈ ನಡುವೆ ನಟ ನಾಗಚೈತನ್ಯ ಅಭಿನಯದ ಲವ್ ಸ್ಟೋರಿ ಚಿತ್ರ ಅದೇ ದಿನಾಂಕದಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇದರಿಂದ ನಾನಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇಬ್ಬರು ನಟರು ತಮ್ಮ ತಮ್ಮ ಚಿತ್ರ ಮತ್ತೊಂದು ಚಿತ್ರ ಎದುರು ನೆಲಕಚ್ಚುತ್ತದೆ ಎಂಬ ಭಯದಲ್ಲಿದ್ದಾರೆ. ಆದರೆ ಕೆಲವರು ತಕ್ ಜಗದೀಶ್ ಚಿತ್ರ ಆ ದಿನ ಬಿಡುಗಡೆಯಾಗುವುದಿಲ್ಲ ಎಂದು ಖಚಿತವಾದ ಮೇಲೆ ಲವ್ ಸ್ಟೋರಿ ಚಿತ್ರದ ನಿರ್ಮಾಪಕರು ಚಿತ್ರ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ ಎಂದು ಹೇಳುತ್ತಾರೆ.