Publish Date: Sun, 23 Aug 2020 (10:05 IST)
Updated Date: Sun, 23 Aug 2020 (10:07 IST)
ಚೆನ್ನೈ : ತಮಿಳು ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಕೊನೆಗೂ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಸೂರರೈ ಪೊಟ್ರು ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ ಮುಂದಿನ ದಿನಗಳಲ್ಲಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಥಿಯೇಟರ್ ಮಾಲೀಕರು ವಿರೋಧಿಸಿದ್ದಾರೆ. ಆದರೆ ಕೊರೊನಾ ಭೀತಿಯಿಂದ ಥಿಯೇಟರ್ ಗಳು ತೆರೆಯುವುದು ಅನುಮಾನ ಎನ್ನಲಾಗಿದೆ.
ಆದಕಾರಣ ನಟ ಸೂರ್ಯ ಸೂರರೈ ಪೊಟ್ರು ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಅಕ್ಟೋಬರ್ 30ನೇ ತಾರೀಖಿನಂದು ಆನ್ ಲೈನ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.