Select Your Language

Notifications

webdunia
webdunia
webdunia
webdunia

ಜಗತ್ತಿಗೆ ಒಬ್ಬನೇ ಸೂರ್ಯನಲ್ಲ! ಸೂರ್ಯನಿಗೂ ಅವಳಿಯಿದ್ದ!

ಜಗತ್ತಿಗೆ ಒಬ್ಬನೇ ಸೂರ್ಯನಲ್ಲ! ಸೂರ್ಯನಿಗೂ ಅವಳಿಯಿದ್ದ!
ನವದೆಹಲಿ , ಶುಕ್ರವಾರ, 21 ಆಗಸ್ಟ್ 2020 (09:32 IST)
ನವದೆಹಲಿ: ಜಗತ್ತಿಗೆ ಒಬ್ಬನೇ ಸೂರ್ಯ ಎನ್ನುವುದು ಪ್ರಚಲಿತ ಮಾತು. ಆದರೆ ಒಂದು ಕಾಲದಲ್ಲಿ ಸೂರ್ಯನಿಗೂ ಅವಳಿಯಿದ್ದ ಎಂದು ಹಾರ್ವರ್ಡ್ ವಿವಿಯ ಸಂಶೋಧಕರು ಹೇಳಿದ್ದಾರೆ.

 
ಈ ಜಗತ್ತು, ಸೌರ ಮಂಡಲ ರೂಪುಗೊಂಡಾಗ ಸೂರ್ಯನಿಗೆ ತದ್ರೂಪವೊಂದಿತ್ತು. ಆದರೆ ಕಾಲ ಕಳೆದಂತೆ ಇದು ನಶಿಸಿತು. ಈ ರೀತಿ ಸೌರಮಂಡಲದಲ್ಲಿ ಅನೇಕ ನಶಿಸಿದ ಗ್ರಹಗಳು ಇದ್ದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸೌರ ಮಂಡಲದ ಹೊರಾವರಣದಲ್ಲಿರುವ ಓರ್ಟ್ ಕ್ಲೌಡ್ ನಲ್ಲಿ ಈ ಅವಳಿ ಸೂರ್ಯನ ಅವಶೇಷ ಕಾಣಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯನ ಬಗೆಗಿನ ಅಧ್ಯಯನದಲ್ಲಿ ಈ ಅಂಶ ಮಹತ್ವ ಪಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುನಿವರ್ಸಿಟಿಗಳ ಮೇಲೆ ಡೊನಾಲ್ಡ್ ಟ್ರಂಪ್ ಹದ್ದಿನ ಕಣ್ಣು