Daily Horoscope

Select Your Language

Notifications

webdunia
webdunia
webdunia
webdunia

ಪತಿ ಸೂರ್ಯಗೆ ವಿಚ್ಛೇದನ ಸುದ್ದಿಗೆ ಸ್ಪಷ್ಟನೆ ಕೊಟ್ಟ ಜ್ಯೋತಿಕಾ

Suriya Jyothika
ಚೆನ್ನೈ: ಕಾಲಿವುಡ್ ನ ಜನಪ್ರಿಯ ಜೋಡಿ ಸೂರ್ಯ ಮತ್ತು ಜ್ಯೋತಿಕಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಇದರ ಬಗ್ಗೆ ಇದೀಗ ಸ್ವತಃ ಜ್ಯೋತಿಕಾ ಸ್ಪಷ್ಟನೆ ಕೊಟ್ಟಿದ್ದಾರೆ.

ಸೂರ್ಯ ಮತ್ತು ಜ್ಯೋತಿಕಾ 2006 ರಲ್ಲಿ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಈಗ ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಇಬ್ಬರೂ ಜೊತೆಯಾಗಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಕೆಲವು ಸಮಯದ ಮೊದಲು ದಂಪತಿ ಮುಂಬೈನಲ್ಲಿ ಮನೆ ಮಾಡಿಕೊಂಡಿದ್ದರು. ಇದೀಗ ಸೂರ್ಯ ಚೆನ್ನೈನಲ್ಲಿ ಮತ್ತು ಜ್ಯೋತಿಕಾ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಬ್ಬರೂ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಹಬ್ಬಿತ್ತು.

ಈ ವದಂತಿಗಳಿಗೆ ಜ್ಯೋತಿಕಾ ಸ್ಪಷ್ಟನೆ ನೀಡಿದ್ದಾರೆ. ನಾವು ಮುಂಬೈನಲ್ಲೂ ಮನೆ ಮಾಡಿಕೊಂಡಿರುವುದು ನಿಜ. ಸೂರ್ಯ ಚೆನ್ನೈನಲ್ಲಿ ಮತ್ತು ನಾನು ಮುಂಬೈನಲ್ಲಿರುವುದು ನಿಜ. ಆದರೆ ಸಿನಿಮಾ ಕಾರಣಗಳಿಗಾಗಿ ಮತ್ತು ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂದು ಮುಂಬೈನಲ್ಲಿ ಮನೆ ಮಾಡಿಕೊಂಡಿದ್ದೇನೆ. ಆದರೆ ವಿಚ್ಛೇದನ ಕಾರಣಕ್ಕೆ ಬೇರೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಗೆ ಬಂದ ಕಾಂತಾರ ‘ಲೀಲಾ’ ಸಪ್ತಮಿ ಗೌಡ