ಚೆನ್ನೈ : ಸುಧಾ ಕೆ.ಪ್ರಸಾದ್ ನಿರ್ದೇಶನದ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಈ ಚಿತ್ರವನ್ನು ಖ್ಯಾತ ನಿರ್ದೇಶಕರೊಬ್ಬರು ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.
									
										
								
																	
ಹೌದು. ಮಹಾನ್ ನಿರ್ದೇಶಕರಾಗಿ ಪ್ರಸಿದ್ಧರಾದ ಶಂಕರ್ ಅವರು  ಸೂರರೈ ಚಿತ್ರ ಸೇರಿ ಒಟ್ಟು ಮೂರು ಚಿತ್ರಗಳನ್ನು ನೋಡಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಸೂರರೈ ಚಿತ್ರ ನೋಡಿ ನಟ ಸೂರ್ಯ ಅವರನ್ನು ಹೊಗಳಿದ್ದಾರೆ. ಅದರ ಜೊತೆಗೆ ಅಂಟಕಾರಂ ಮತ್ತು ಜಲ್ಲಿಕಟ್ಟು ಚಿತ್ರದ ಗುಣಗಾನ ಮಾಡಿದ್ದಾರೆ.
									
			
			 
 			
 
 			
			                     
							
							
			        							
								
																	ಪ್ರಸ್ತುತ ನಿರ್ದೇಶಕ ಶಂಕರ್ ಅವರು ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.